ಕಾರವಾರ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಏಳು ಲಕ್ಷದ ಹದಿನೈದು ಸಾವಿರ ಮೌಲ್ಯದ 2,440 ಲೀಟರ್ ಗೋವಾ ಅಕ್ರಮ ಸರಾಯಿಯನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಹಳ್ಳಿ ಗ್ರಾಮದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದು, ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ.
ಗುರುವಾರ ಮಧ್ಯರಾತ್ರಿ ವೇಳೆ ಕಾರವಾರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕರ ಆಪ್ತನಾಗಿದ್ದ ಶಿರವಾಡದ ದಿಲೀಪ್ ಮಹಾನಂದ ನಾಯ್ಕ, ಸುನಿಲ್ ಪಂಡಿತ್ ಹಾಗೂ ವಿಷ್ಣು ತಾಳೇಕರ್ ಎಂಬವರು ಬೆಳಗಾವಿಯ ನಕಲಿ ನೊಂದಣಿ ಹೊಂದಿದ್ದ ವಿಂಗರ್ ನಲ್ಲಿ ಸಾಗಿಸುತ್ತಿದ್ದ ವೇಳೆ ಅಬಕಾರಿ ಸಿಬ್ಬಂದಿ ತಡೆದು ಪರಿಶೀಲಿಸಿದ್ದಾರೆ.
ಆಗ ಅಧಿಕಾರಿಗಳನ್ನು ಯಾಮಾರಿಸಿದ ಆರೋಪಿಗಳು ಕಾರವಾರ ತಾಲೂಕಿನ ಆಮದಳ್ಳಿ ಗ್ರಾಮದಲ್ಲಿನ ಸೀತಾರಾಮ್ ಪ್ರಭಾಕರ್ ಚಿಂಚನಕರ್ ಎಂಬವರ ಮನೆಯೊಂದರ ಕಾಂಪೌಂಡ್ ನಲ್ಲಿ ಇಳಿಸಿ ಗಾಡಿಯೊಂದಿಗೆ ಪರಾರಿಯಾಗಿದ್ದಾರೆ. ಆಗ ವಾಹನವನ್ನು ಹಿಂಬಾಲಿಸಿ ಬಂದ ಅಬಕಾರಿ ಅಧಿಕಾರಿಗಳು ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಈ ಹಿನ್ನಲೆಯಲ್ಲಿ ಮದ್ಯ ದೊರೆತ ಕಾರವಾರ ತಾಲೂಕಿನ ಆಮದಳ್ಳಿ ಗ್ರಾಮದಲ್ಲಿನ ಸೀತಾರಾಮ್ ಪ್ರಭಾಕರ್ ಚಿಂಚನಕರ್, ಶಿರವಾಡದ ದಿಲೀಪ್ ಮಹಾನಂದ ನಾಯ್ಕ, ಸುನಿಲ್ ಪಂಡಿತ್ ಮತ್ತು ವಿಷ್ಣು ತಾಳೇಕರ್ ಮೇಲೆ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾದವರಿಗಾಗಿ ಹುಡುಕಾಟ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.