Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

Lok Sabha Election 2024: ಮತದಾನ ಮಾಡಲು ಸ್ಟೈಲಾಗಿ ಬಂದ ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಮೈಸೂರು , ಶುಕ್ರವಾರ, 26 ಏಪ್ರಿಲ್ 2024 (12:26 IST)
Photo Courtesy: Twitter
ಮೈಸೂರು: ಕರ್ನಾಟಕದಲ್ಲಿ ಇಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ತಮ್ಮ ತವರು ಮೈಸೂರಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಸಿದ್ದರಾಮಯ್ಯ ಮತಗಟ್ಟೆಗೆ ಬಂದಿದ್ದ ಖದರೇ ಬೇರೆಯಾಗಿತ್ತು. ಕಾರಿನ ಡೋರ್ ತೆರೆದು ನಿಂತು ಮೆರವಣಿಗೆ ಮೂಲಕ ಸಿದ್ದರಾಮಯ್ಯ ಮತಗಟ್ಟೆಗೆ ಬಂದಿದ್ದಾರೆ. ಸಿದ್ದರಾಮಯ್ಯ ಸ್ಟೈಲಾಗಿ ಮತಗಟ್ಟೆಗೆ ಬಂದಿದ್ದು ವಿಶೇಷವಾಗಿತ್ತು. ಮತ ಚಲಾಯಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಎರಡೂ ಹಂತದ ಮತದಾನಕ್ಕೆ ಸಾಕಷ್ಟು ಪ್ರಚಾರ ಮಾಡಿದ್ದೇನೆ. ಈ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಮೈಸೂರು, ಚಾಮರಾಜನಗರ, ಬೀದರ್, ಕುಲಬರಗಿಯಲ್ಲಿ ನಾವು ಗೆಲ್ಲುತ್ತೇವೆ ಎಂದರು. ಈ ವೇಳೆ ಮಾಧ‍್ಯಮಗಳು ಕಾಂಗ್ರೆಸ್ ಗೆ ಎಷ್ಟು ಸ್ಥಾನ ಬರಬಹುದು ಎಂದು ಪ್ರಶ್ನೆ ಮಾಡಿವೆ.

ಇದಕ್ಕೆ ಉತ್ತರಿಸಿದ ಸಿಎಂ ಗೌಪ್ಯ ಮತದಾನವಾಗಿರುವುದರಿಂದ ಎಷ್ಟು ಬರಬಹುದು ಎಂದು ಹೇಳಲು ಸಾಧ‍್ಯವಿಲ್ಲ. ಆದರೆ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದೆ ಎಂದರು. ಸಿದ್ದರಾಮಯ್ಯಗೆ ಮತದಾನ ಮಾಡಲು ಪುತ್ರ ಯತೀಂದ್ರ ಕೂಡಾ ಸಾಥ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ವೋಟಿಂಗ್ ನಲ್ಲಿ ದಕ್ಷಿಣ ಕನ್ನಡ ಫಸ್ಟ್