ವೀರಶೈವ ಪದವನ್ನು ವಿದ್ಯಾವಂತರು ಬಳಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಲಿಂಗಾಯುತ ಪದ ಬಳಕೆಯಲ್ಲಿದೆ. ಎರಡು ಪದಗಳ ಅರ್ಧ ಒಂದೇ ಎಂಬುವುದು ನಮ್ಮ ಅಭಿಪ್ರಾಯ ಎಂದು ವಿವಾದದ ಬಗ್ಗೆ ಸಿದ್ದಗಂಗಾ ಮಠ ಸ್ಪಷ್ಟನೆ ನೀಡಿದೆ.
ಒಂದು ಸಮಾಜವನ್ನು ಇಬ್ಬಾಗ ಮಾಡುವುದು ಒಳ್ಳೆಯದಲ್ಲ. ಯಾರೇ ಇಂತಹ ಪ್ರಯತ್ನ ಮಾಡಿದರೂ ಸರಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತ್ಯೇಕ ಲಿಂಗಾಯುತ ಧರ್ಮದ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಚರ್ಚಿಸಿದ್ದಾರೆ. ಸಮಾಜ ಮುಖಂಡರು ಒಂದು ಕಡೆ ಕುಳಿತು, ಚರ್ಚಿಸಿ ಸರ್ವಸಮ್ಮತ ನಿರ್ಧಾರ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾಗಿ ಸಿದ್ದಗಂಗಾ ಮಠ ಸ್ಪಷ್ಟಪಡಿಸಿದೆ.
ಆದರೆ, ಸಿದ್ದಗಂಗಾ ಶ್ರೀಗಳು ಲಿಂಗಾಯುತ ಪರವಾಗಿ ಸೂಚಿಸಿದ್ದಾರೆ ಎನ್ನುವ ಸಚಿವ ಎಂ..ಬಿ.ಪಾಟೀಲ್ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಸಿದ್ದಗಂಗಾ ಮಠ ಸ್ಪಷ್ಟನೆ ನೀಡಿದೆ.
ಸಿದ್ದಗಂಗಾ ಶ್ರೀಗಳು ಲಿಂಗಾಯುತ ಪರವಾಗಿ ಸೂಚಿಸಿದ್ದಾರೆ. ನಮ್ಮ ಕುಟುಂಬದವರ ಮೇಲೆ ಆಣೆ ಮಾಡಲು ಸಿದ್ದ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ. ಪಾಟೀಲ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.