Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಯೋತ್ಪಾದಕ ಬಿಲಾಲ್‌ಗೆ ಜೀವಾವಧಿ ಶಿಕ್ಷೆ

ಭಯೋತ್ಪಾದಕ ಬಿಲಾಲ್‌ಗೆ ಜೀವಾವಧಿ ಶಿಕ್ಷೆ
ಬೆಂಗಳೂರು , ಬುಧವಾರ, 5 ಅಕ್ಟೋಬರ್ 2016 (16:51 IST)
ಭಯೋತ್ಪಾದಕ ಇಮ್ರಾನ್ ಬಿಲಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಂಗಳೂರಿನ 56 ನೇ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.
 
ವಿಧಾನಸೌಧ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಲಷ್ಕರ್-ಎ-ತೊಯಿಬಾ ಸಂಘಟನೆಯ ಉಗ್ರ ಇಮ್ರಾನ್ ಬಿಲಾಲ್ ಅಹ್ಮದ್ ತಪ್ಪಿತಸ್ಥ ಎಂದು ಸಿಟಿ ಸಿವಿಲ್ ಕೋರ್ಟ್ ನಿನ್ನೆ ತೀರ್ಪು ನೀಡಿತ್ತು. ಇಂದು ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಮೂರ್ತಿ ಕೊಟ್ರಯ್ಯ ಹಿರೇಮಠ್ ತೀರ್ಪು ನೀಡಿದ್ದಾರೆ.
 
ರಾಜ್ಯಧಾನಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಹೊಸಪೇಟೆಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಸಮಯದಲ್ಲಿ ಇತನನ್ನು ಪೊಲೀಸರು ಬಂಧಿಸಿದ್ದರು. 
 
ಉಗ್ರ ಬಿಲಾಲ್‌ನನ್ನು ಬಂಧಿಸಿದ ಪೊಲೀಸರು ಆತ ಹಂಪಿಯಲ್ಲಿ ನೆಲೆಸಿದ್ದ ಮನೆಗೆ ಕರೆದೊಯ್ದಾಗ ಅಲ್ಲಿ ಎ.ಕೆ.56, ಗ್ರೆನೇಡ್, ಉಪಗ್ರಹ ಪೋನ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಂಬರ್ ಗೇಮ್ : ಸೀಟು ಹಂಚಿಕೆ ಆಧಾರದ ಮೇಲೆ ಸೇನೆ-ಬಿಜೆಪಿ ಮೈತ್ರಿ ನವೀಕರಣ