ಕೋಲಾರ: ಚಿರತೆ ದಾಳಿಗೆ ವ್ಯಕ್ತಿಯೋರ್ವ ಬಲಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ವೀರಕಪುತ್ರ ಗ್ರಾಮದಲ್ಲಿ ನಡೆದಿದೆ.
ಬಂಡೂರು ಗ್ರಾಮದ ವೆಂಕಟೇಶಪ್ಪ (45) ಚಿರತೆ ದಾಳಿಗೆ ಬಲಿಯಾದ ವ್ಯಕ್ತಿ. ಕಳೆದ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವೆಂಕಟೇಷಪ್ಪ ರ ದೇಹದ ಅರ್ಧ ಭಾಗದಷ್ಟನ್ನು ಚಿರತೆ ತಿಂದು ಹಾಕಿದೆ. ಇಂದು ಬೆಳಗ್ಗೆ ರಕ್ತ ಸಿಕ್ತ ಶವ ಪತ್ತೆಯಾಗಿದೆ.
ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು , ಪೊಲೀಸರು ಭೇಟಿ ನೀಡಿದ್ದಾರೆ.