Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಸ್ ಪ್ರಯಾಣಿಕರಿಗೆ ಖುಷಿ ಸುದ್ದಿ

ಬಸ್ ಪ್ರಯಾಣಿಕರಿಗೆ ಖುಷಿ ಸುದ್ದಿ
ಬೆಂಗಳೂರು , ಸೋಮವಾರ, 1 ಜೂನ್ 2020 (19:12 IST)
ಕೆಂಪು ವಲಯವಿಲ್ಲದ ಅಂತರ ರಾಜ್ಯದ ಪ್ರದೇಶಗಳಿಗೆ ಬಸ್ ಓಡಿಸಲು ಚರ್ಚೆ ನಡೆದಿದೆ.

ಸದ್ಯದಲ್ಲಿ ಈ ಕುರಿತು ಸರಕಾರ ನಿರ್ಧಾರ ಪ್ರಕಟಿಸಲಿದೆ. ಒಟ್ಟಾರೆ ನಷ್ಟವನ್ನು ಸರಿದೂಗಿಸಲು ಲಾಭವಲ್ಲದ ಮಾರ್ಗಗಳಲ್ಲಿ ಬಸ್ ಸಂಚಾರ ಕಡಿಮೆ ಮಾಡುವುದು, ಅನಾವಶ್ಯಕವಾಗಿರುವ ಸಿಬ್ಬಂದಿ ಕಡಿಮೆ ಮಾಡುವುದು, ಮೊದಲಾದ ಕ್ರಮ ತೆಗೆದುಕೊಳ್ಳಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಲಾಕ್ ಡೌನ್ ಹಿನ್ನಲೆಯಲ್ಲಿ ರಾಜ್ಯದ ಸಾರಿಗೆ ಸಂಸ್ಥೆ ಅನುಭವಿಸುತ್ತಿರುವ ನಷ್ಟವನ್ನು ಇನ್ನು ಎರಡು ತಿಂಗಳ ಕಾಲ ರಾಜ್ಯ ಸರ್ಕಾರವೇ ಭರಿಸಬೇಕಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳಿಂದ 1800 ಕೋಟಿ ರೂ ನಷ್ಟ ಉಂಟಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಈಗ ಸಾರಿಗೆ ಸಂಚಾರ ಆರಂಭಿಸಿದ್ದರೂ,  ಮೊದಲಿಗಿಂತ ಈಗ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಇದಕ್ಕೆ ಕಾರಣ ಕಡಿಮೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದಾಗಿದೆ ಎಂದಿದ್ದಾರೆ.  

ಪ್ರತಿ ನಿತ್ಯ 6 ಕೋಟಿ ರೂ. ನಷ್ಟವಾಗುತ್ತಿದೆ. ಆದರೂ ಜನರ ಅಗತ್ಯತೆ ಹಿನ್ನಲೆಯಲ್ಲಿ ಸೇವೆಯಾಗಿ ಬಸ್ ಗಳನ್ನು ಓಡಿಸಲಾಗುತ್ತಿದೆ. ಹಂತ ಹಂತವಾಗಿ ಗ್ರಾಮೀಣ ಪ್ರದೇಶಕ್ಕೆ ಓಡಿಸಲಾಗುತ್ತದೆ ಎಂದಿದ್ದಾರೆ. ಸಾಮಾಜಿಕ ಅಂತರಿವಿಲ್ಲದೇ ಬಸ್ ಓಡಿಸಿದಾಗ ಮಾತ್ರ ಸಾರಿಗೆ ಇಲಾಖೆಯ ನಷ್ಟ ತಪ್ಪುತ್ತದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

115 ಪೊಲೀಸ್ ರ ಕೊರೊನಾ ರಿಸಲ್ಟ್