Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕನ್ನಡ ಕಲಿಯದಿದ್ರೆ ವಜಾ: ಬ್ಯಾಂಕ್‌ ಸಿಬ್ಬಂದಿಗೆ ಕರ್ನಾಟಕ ಅಭಿವೃದ್ಧಿ ಪ್ರಾಧೀಕಾರ ಎಚ್ಚರಿಕೆ

ಕನ್ನಡ ಕಲಿಯದಿದ್ರೆ ವಜಾ: ಬ್ಯಾಂಕ್‌ ಸಿಬ್ಬಂದಿಗೆ ಕರ್ನಾಟಕ ಅಭಿವೃದ್ಧಿ ಪ್ರಾಧೀಕಾರ ಎಚ್ಚರಿಕೆ
ಬೆಂಗಳೂರು , ಮಂಗಳವಾರ, 8 ಆಗಸ್ಟ್ 2017 (13:22 IST)
ರಾಷ್ಟ್ರೀಕೃತ, ಖಾಸಗಿ  ಮತ್ತು ಗ್ರಾಮೀಣ ಬ್ಯಾಂಕ್‌ಗಳ ಅನ್ಯಭಾಷಿಕರಿಗೆ ಎಚ್ಚರಿಕೆ ನೀಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬ್ಯಾಂಕ್ ವ್ಯವಸ್ಥಾಪಕರು ಆರು ತಿಂಗಳೊಳಗೆ ಕನ್ನಡ ಭಾಷೆ ಕಲಿಯದಿದ್ದಲ್ಲಿ ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
 
ದಿನದಿಂದ ದಿನಕ್ಕೆ ಬ್ಯಾಂಕ್‌ಗಳ ಸಿಬ್ಬಂದಿಗಳು ಸ್ಥಳೀಯ ಭಾಷೆಯಲ್ಲಿಯೇ ವ್ಯವಹರಿಸಬೇಕಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕಾಗುತ್ತದೆ. ಆದ್ದರಿಂದಲೇ ಕನ್ನಡ ಭಾಷೆ ಕಲಿಯುವುದು  ಕಡ್ಡಾಯಪಡಿಸಿಕೊಳ್ಳಿ ಎಂದು ನಿರ್ದೇಶನ ನೀಡಿದೆ.
 
ಪ್ರಸಕ್ತ ವರ್ಷದ ಆರಂಭದಲ್ಲಿ ಕನ್ನಡದಲ್ಲಿ ಬರೆದ ಚೆಕ್‌ನ್ನು ಐಸಿಐಸಿಐ ಬ್ಯಾಂಕ್‌ ಅಮಾನ್ಯ ಮಾಡಿದ್ದರಿಂದ ಗ್ರಾಹಕ ಕೋರ್ಟ್‌ನಲ್ಲಿ ಬ್ಯಾಂಕ್ ವಿರುದ್ಧ ದಾವೆ ಹೂಡಿರುವುದನ್ನು ಸ್ಮರಿಸಬಹುದು.
 
ಕರ್ನಾಟಕ ಅಭಿವೃದ್ಧಿ ಪ್ರಾಧೀಕಾರಕ್ಕೆ ಬ್ಯಾಂಕ್ ಸಿಬ್ಬಂದಿಯನ್ನು ವಜಾಗೊಳಿಸುವ ಅಧಿಕಾರವಿದೆಯೇ ಎನ್ನುವ ಬಗ್ಗೆ ಸ್ಪಷ್ಟಪಡಿಸಿಲ್ಲ  ರಾಜ್ಯದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರಾಧೀಕಾರದ ಹೇಳಿಕೆ ಮಹತ್ವದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
 
ಸಾಮಾಜಿಕ ಮಾಧ್ಯಮ ಪ್ರಚಾರ ಮತ್ತು ಮಾರ್ಗದರ್ಶನದ ಒತ್ತಡವು ಹಣಕಾಸಿನ ಸೇವೆಗಳನ್ನು ಕನ್ನಡದಲ್ಲಿ ಸರಳ ಮತ್ತು ಸುಲಭವಾಗಿ ಅರ್ಥವಾಗುವ ಪದಗಳಲ್ಲಿ ಲಭ್ಯವಾಗುವಂತೆ ಮಾಡುವುದು. ಇಂಗ್ಲಿಷ್ ಮತ್ತು ಹಿಂದಿಗೆ ಹೆಚ್ಚುವರಿಯಾಗಿ ಕನ್ನಡದಲ್ಲಿ ಎಲ್ಲಾ ಸುತ್ತೋಲೆಗಳು ಮತ್ತು ಮಾರ್ಗದರ್ಶನಗಳು ಇರಬೇಕು ಎನ್ನುವುದು ಕರ್ನಾಟಕ ಅಭಿವೃದ್ಧಿ ಪ್ರಾಧೀಕಾರದ ಮುಖ್ಯ ಗುರಿಯಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗಣಿತ ವಿಷಯಕ್ಕೆ ಆದ್ಯತೆ ಕೊಡು ಎಂದ ತಂದೆಯನ್ನೇ ಹತ್ಯೆಗೈದ 16ರ ವಿದ್ಯಾರ್ಥಿ