Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸರಕಾರದಿಂದಲೇ ಹಗಲು ದರೋಡೆ ನಡೆಯುತ್ತಿದೆ ಎಂದ ಲೀಡರ್

ಸರಕಾರದಿಂದಲೇ ಹಗಲು ದರೋಡೆ ನಡೆಯುತ್ತಿದೆ ಎಂದ ಲೀಡರ್
ಶಿವಮೊಗ್ಗ , ಶನಿವಾರ, 16 ಮಾರ್ಚ್ 2019 (13:52 IST)
ಸರಕಾರದಿಂದಲೇ ಹಗಲು ದರೋಡೆ ನಡೆಯುತ್ತಿದೆ. ಹೀಗಂತ ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಆರೋಪ ಮಾಡಿದ್ದಾರೆ.

ಪಿಯುಸಿ ಉಪನ್ಯಾಸಕರು ಮೌಲ್ಯ ಮಾಪನವನ್ನು ಬಹಿಷ್ಕಾರ ಹಾಕುವುದಾಗಿ ಹೇಳುತ್ತಿದ್ದಾರೆ. 2 ನೇ ಹೆಚ್ಚುವರಿ ವೇತನ ಭತ್ಯೆ, ಕಾಲ್ಪನಿಕ ವೇತನ ಸೇರಿದಂತೆ ಅನೇಕ ಬೇಡಿಕೆ ಈಡೇರಿಸಲು ಉಪನ್ಯಾಸಕರು ಆಗ್ರಹಿಸುತ್ತಲೇ ಬಂದಿದ್ದಾರೆ.

ಇತ್ತೀಚೆಗೆ ಸಕಾಲಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ. ಆರು ತಿಂಗಳಿಂದ ಸಂಬಳ ಇಲ್ಲ. ಈ ನಡುವೆ ಮೇ ಮೊದಲ ವಾರದಿಂದಲೇ ತರಗತಿ ಆರಂಭಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಸಮಸ್ಯೆ ಬಗೆ ಹರಿಸಬೇಕಾದ ಸಚಿವರು ರಾಜೀನಾಮೆ ನೀಡಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಇದೀಗ ಸಿಎಂ ಕುಮಾರಸ್ವಾಮಿ ಅವರ ಬಳಿ ಇದೆ. ಕಳೆದ ತಿಂಗಳು ಮಾತುಕತೆಗೆ ದಿನಾಂಕ ನಿಗದಿಯಾಗಿದ್ದರೂ ನಡೆಯಲಿಲ್ಲ. ನಿನ್ನೆ ಮತ್ತೊಮ್ಮೆ ಸಭೆ ಆಗಬೇಕಿತ್ತಾದರೂ ಸಿಎಂ ಬರಲಿಲ್ಲ. ಆರೋಗ್ಯ ಇಲಾಖೆಯ ನೌಕರರ ಪರಿಸ್ಥಿತಿಯೂ ಇದೇ ರೀತಿ ಇದೆ ಎಂದರು.

ಎನ್.ಪಿ.ಎಸ್. ನೌಕರರ ಸಮಸ್ಯೆ ಬಗೆಹರಿದಿಲ್ಲ. ಸರಕಾರದಿಂದಲೇ ಹಗಲು ದರೋಡೆ ನಡೆಯುತ್ತಿದೆ. ಮಾಜಿ ಪ್ರಧಾನಿ ದೇವೇಗೌಡ ತಮ್ಮ ಮೊಮ್ಮಕ್ಕಳ ಬಗ್ಗೆ ಕಣ್ಣೀರು ಸುರಿಸುತ್ತಿದ್ದಾರೆ. ಕೇವಲ ಕಾಂಗ್ರೆಸ್ ಭಾರತವಾದರೆ ಸಾಲದು. ಕಣ್ಣೀರು ಮುಕ್ತವೂ ಆಗಬೇಕು ಎಂದು ಸೂಕ್ಷ್ಮವಾಗಿ ಕುಟುಕಿದರು.

ಇದೀಗ ಚುನಾವಣೆ ನೀತಿ ಸಂಹಿತೆ ಹೆಸರಿನಲ್ಲಿ ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆದಿದೆ ಅಂತಾನೂ ಅವ್ರು ದೂರಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಗುಡಿಸಲಿಗೆ ಬಿದ್ದ ಬೆಂಕಿಗೆ ಅಡಿಕೆ ತೋಟ ಸುಟ್ಟಿತು...