ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನನ್ನು ಪೊಲೀಸರೆದುರೇ ವಕೀಲರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಅತ್ಯಾಚಾರ ಕೇಸ್ ವಿಚಾರಣೆಗೆ ಎಂದು ನ್ಯಾಯಾಲಯಕ್ಕೆ ಆರೋಪಿಯನ್ನು ಪೊಲೀಸರು ಕರೆತರುತ್ತಿದ್ದಾಗ ಅಲ್ಲಿದ್ದ ವಕೀಲರ ಗುಂಪೊಂದು ಹಲ್ಲೆ ನಡೆಸಿದೆ.
ಹಲ್ಲೆ ಮಾಡುತ್ತಿರುವ ನ್ಯಾಯವಾದಿಗಳಿಂದ ಆರೋಪಿಯನ್ನು ಪೊಲೀಸರು ಕಷ್ಟಪಟ್ಟು ರಕ್ಷಣೆ ಮಾಡಿದ್ದಾರೆ.
ಇಂದೋರ್ ನಲ್ಲಿ ಮೂರು ವರ್ಷದ ಬಾಲಕಿ ಮೇಲೆ ಆರೋಪಿ ಅತ್ಯಾಚಾರ ನಡೆಸಿದ್ದನು ಎಂದು ದೂರಲಾಗಿತ್ತು.