ಬೆಂಗಳೂರು: ಲೈಂಗಿಕ ಕ್ರಿಯೆಗಾಗಿ ಪೀಡಿಸುತ್ತಿದ್ದ ಪ್ರಿಯಕರನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಿಯಕರ ಕುಡಿದು ಬಂದು ಲೈಂಗಿಕ ಕ್ರಿಯೆಗಾಗಿ ಪೀಡಿಸಿದ್ದು, ಇದರಿಂದ ಬೇಸತ್ತ ಪ್ರೇಯಸಿ, ಪ್ರಿಯಕರ ಮುತ್ತುರಾಜ್ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಕುಡಿದು ಸತ್ತಿರುವಂತೆ ಬಿಂಬಿಸುವ ಸಲುವಾಗಿ ಶವವನ್ನು ರೋಡ್ ನಲ್ಲಿ ತಂದು ಎಸೆದಿದ್ದಾಳೆ.
ಆದರೆ ಮರಣೋತ್ತರ ಪರೀಕ್ಷೆ ಬಳಿಕ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮಹಿಳೆ ಮತ್ತು ಮುತ್ತುರಾಜ್ ಲೀವಿಂಗ್ ರಿಲೇಷನ್ ಷಿಪ್ ನಲ್ಲಿದ್ದರು ಎನ್ನಲಾಗಿದೆ. ಮೃತ ಮುತ್ತುರಾಜ್ ಖಾಸಗಿ ಬಸ್ ಕಂಡೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಈ ಸಂಬಂಧ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿ ಪ್ರೇಯಸಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.