ದಸರಾ ಹಬ್ಬದ ಸಂದರ್ಭದಲ್ಲಿ ಸಿತಾಫಲ ಮಾರುಕಟ್ಟೆಗೆ ಲಗ್ಗೆ ಇಡುತ್ತಿತ್ತು. ಆದರೆ ಮಳೆ ಕೊರತೆ ಕಾರಣದಿಂದ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಸಿತಾಫಲ ಲಭ್ಯವಾಗುತ್ತಿಲ್ಲ.
ಸಿತಾಫಲ ಪ್ರಿಯರಿಗೆ ಈ ಬಾರಿ ಕೊಂಚ ನಿರಾಸೆ ಕಾದಿದೆ. ಪ್ರತಿ ಬಾರಿ ದಸರಾ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹೇರಳವಾಗಿ ಸಿತಾಫಲ ಬರುತ್ತಿತ್ತು. ಆದರೆ ಈಗ ಮಳೆ ಕೊರತೆ ಸಿತಾಫಲ ಬೆಳೆಗೆ ಕಾಡುತ್ತಿದೆ. ಮಳೆ ಕೊರತೆಯಿಂದಾಗಿ ಹಣ್ಣುಗಳು ಕೂಡ ಮಾರುಕಟ್ಟೆಯಲ್ಲಿ ವಿರಳವಾಗುತ್ತಿದ್ದು, ಬೆಲೆ ಏರಿಕೆಯೂ ಕಾಣುತ್ತಿದೆ.
ಹೈದ್ರಾಬಾದ್ ಕರ್ನಾಟಕ ಸೇರಿದಂತೆ ತೆಲಂಗಾಣ, ಹೈದ್ರಾಬಾದ್, ಪಿಟಲಂ, ಮಹಾರಾಷ್ಟ್ರದ ಲಾತೂರ್ ಮತ್ತಿತರ ಕಡೆಗಳಿಗೆ ರಫ್ತಾಗುತ್ತಿದ್ದ ಸಿತಾಫಲದ ಪ್ರಮಾಣದಲ್ಲಿಯೂ ಈ ಬಾರಿ ಗಣನೀಯವಾಗಿ ಇಳಿಕೆಯಾಗಿದೆ.
ಮಳೆ ಕೊರತೆ ಕಾರಣದಿಂದ ಸಿತಾಫಲ ಗಿಡಗಳು ಬಹುತೇಕ ಕಡೆಗಳಲ್ಲಿ ಒಣಗಿವೆ. ಹೀಗಾಗಿ ಹಣ್ಣು ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಕಾಣಸಿಗುತ್ತಿದೆ.