Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರು ಸಬ್ಆರ್ಬನ್ ಯೋಜನೆ - ಎಲ್. ಟಿ. ಕಡಿಮೆ ಬಿಡ್

ಬೆಂಗಳೂರು ಸಬ್ಆರ್ಬನ್ ಯೋಜನೆ - ಎಲ್. ಟಿ. ಕಡಿಮೆ ಬಿಡ್
ಬೆಂಗಳೂರು , ಬುಧವಾರ, 23 ಮಾರ್ಚ್ 2022 (14:41 IST)
ಬೆಂಗಳೂರು ಉಪನಗರ ರೈಲು ಯೋಜನೆಯ ಮೊದಲ ಹಂತದ ಕಾಮಗಾರಿಗೆ ಕರೆಯಲಾಗಿದ್ದ ಆರ್ಥಿಕ ಟೆಂಡರ್ ನಲ್ಲಿ ಲಾರ್ಸನ್&ಟರ್ಬೋ ಸಂಸ್ಥೆ ಅತ್ಯಂತ ಕಡಿಮೆ ಮೊತ್ತವನ್ನು ಬಿಡ್ ಮಾಡಿದೆ. 15,767 ಕೋಟಿ ರೂಪಾಯಿ ಮೊತ್ತದ ಬಿಡ್ ನ್ನು ಎಲ್&ಟಿ ಸಲ್ಲಿಸಿದೆ.
ರೈಲು ಮೂಲಸೌಕರ್ಯ ಅಭಿವೃದ್ಧಿ ಉದ್ಯಮಗಳು 25.01 ಕಿ.ಮೀ ವ್ಯಾಪ್ತಿಯ ಬೈಯ್ಯಪ್ಪನಹಳ್ಳಿ-ಚಿಕ್ಕಬಾಣವಾರ ಮಲ್ಲಿಗೆ ಲೈನ್ಗೆ ಕಳೆದ ವರ್ಷ ನವೆಂಬರ್ 23 ರಂದು ಟೆಂಡರ್ ನೀಡಿತ್ತು. ಸಿವಿಲ್ ಕಾಮಗಾರಿಗಳನ್ನು ನಡೆಸಲು 849.97 ಕೋಟಿ ರೂಪಾಯಿ ಬೆಲೆಯನ್ನು ಹೇಳಿತ್ತು. ಮುಂದಿನ ಬಿಡ್ ಸಲ್ಲಿಸಿದ್ದ ಸಂಸ್ಥೆಗಿಂತ ಇದು 350 ಕೋಟಿ ರೂಪಾಯಿ ಕಡಿಮೆ ಬಿಡ್ ಮೊತ್ತ ಇದಾಗಿತ್ತು. ಈ ಬೆಳವಣಿಗೆಯನ್ನು ಕೆ-ಆರ್ ಐಡಿಇ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಗರ್ಗ್ ದೃಢಪಡಿಸಿದ್ದು, ಎಲ್&ಟಿ ಅತ್ಯಂತ ಕಡಿಮೆ ಬಿಡ್ ಮಾಡಿರುವ ಸಂಸ್ಥೆಯಾಗಿ ಹೊರಹೊಮ್ಮಿದೆ. ಟೆಂಡರ್ ಅನುಮೋದನೆ ಸಮಿತಿ ಇದಕ್ಕೆ ಅನುಮೋದನೆ ನೀಡಬೇಕಿದ್ದು, ಟೆಂಡರ್ ನ್ನು ಅಧಿಕೃತವಾಗಿ ಯಾರಿಗೂ ನೀಡಲಾಗಿಲ್ಲ. ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ 3-4ವಾರಗಳು ಬೇಕಾಗುತ್ತದೆ ಎಂದು ಬೆಂಗಳೂರಿನಲ್ಲಿ ಅಮಿತ್ ಗರ್ಗ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡಿಎ ಬ್ರೋಕರ್ ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ -ಎಸ್ ಆರ್ ವಿಶ್ವನಾಥ್