Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

`ಒಂದು ದಿನವಾದರೂ ನನ್ನನ್ನ ಜೈಲಿಗೆ ಹಾಕಲು ನಿರ್ಧರಿಸಿದ್ದರು.

`ಒಂದು ದಿನವಾದರೂ ನನ್ನನ್ನ ಜೈಲಿಗೆ ಹಾಕಲು ನಿರ್ಧರಿಸಿದ್ದರು.
ಬೆಂಗಳೂರು , ಸೋಮವಾರ, 17 ಜುಲೈ 2017 (14:34 IST)
ವಿಪಕ್ಷಗಳನ್ನ ಹತ್ತಿಕ್ಕಲು ರಾಜ್ಯ ಸರ್ಕಾರ ಪೊಲೀಸರನ್ನ ಬಳಸಿಕೊಳ್ಳುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಧ್ಯರಾತ್ರಿ ಯಡಿಯೂರಪ್ಪನವರ ಮನೆ ಶೋಧದ ಬಗ್ಗೆ ಕಿಡಿಕಾರಿದ ಕುಮಾರಸ್ವಾಮಿ, ಮಧ್ಯರಾತ್ರಿ ಹೋಗಿ ಶೋಧ ನಡೆಸುವ ಅವಶ್ಯಕತೆ ಇರಲಿಲ್ಲ. ಶೋಧಕ್ಕೆ ಸರ್ಚ್ ವಾರೆಂಟ್ ಪಡೆದಿದ್ದರೆ..?  ಸರ್ಚ್ ಮಾಡಿದ್ದರೆ ಅದನ್ನ ಬಹಿರಂಗಪಡಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ಧಾರೆ. ಗೃಹ ಇಲಾಖೆಯ ಅವ್ಯವಸ್ಥೆಗೆ ಕೆಂಪಯ್ಯನವರೇ ಕಾರಣ ಎಂದಿರುವ ಕುಮಾರಸ್ವಾಮಿ, ಗುಪ್ತಚರ ಡಿಜಿಪಿಯಾಗಿದ್ದ ಎಂ.ಎನ್. ರೆಡ್ಡಿ ಸಂಪೂರ್ಣ ವಿಫಲರಾಗಿದ್ದಾರೆಂದು ಹೇಳಿದ್ಧಾರೆ.  

ಪೊಲೀಸ್ ಅಧಿಕಾರಿಗಳಿಗೆ ಹೇಳುವವರು ಕೇಳುವವರು ಇಲ್ಲಾದಾಗಿದೆ. ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಒಂದು ದಿನವಾದರೂ ನನ್ನನ್ನ ಜೈಲಿಗೆ ಹಾಕಲು ನಿರ್ಧರಿಸಿದ್ದರು ಎಂದು ಕುಮಾರಸ್ವಾಮಿ ಹೇಳಿದ್ಧಾರೆ. 30-35 ಕೈದಿಗಳನ್ನ ದಿಢೀರ್ ಸ್ಥಳಾಂತರ ಮಾಡಲಾಗಿದೆ. ಅವರು ಎಲ್ಲಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ. ಈಗ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಈ ಪ್ರಕರಣವನ್ನೂ ಹಳ್ಳ ಹಿಡಿಸಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ಧಾರೆ..

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ ಸೇನೆಯಿಂದ ಭಾರತಕ್ಕೆ ಮತ್ತೊಂದು ಬೆದರಿಕೆ..! ಯುದ್ಧಕ್ಕೆ ನಿಂತೇಬಿಡುತ್ತಾ ಚೀನಾ..?