ಬೆಂಗಳೂರು-ಮಂಗಳೂರು ಕುಡ್ಲ ಎಕ್ಸ್`ಪ್ರೆಸ್ ಹಗಲು ರೈಲು ಸಂಚಾರಕ್ಕೆ ಮಂಗಳೂರು ಜಂಕ್ಷನ್`ನಲ್ಲಿ ಚಾಲನೆ ಸಿಕ್ಕಿದೆ. ಗೋವಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲ್ವೆ ಸಚಿವ ಸುರೇಶ್ ಪ್ರಭು ರೈಲ್ವೆ ಸಂಚಾರಕ್ಕೆ ಚಾಲನೆ ನೀಡಿದರು. ಈ ಹೊಸ ರೈಲು ಕೇವಲ 9 ಗಂಟೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ತಲುಪಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಹಾಜರಿದ್ದರು.
ನೆಲಮಂಗಲ-ಶ್ರವಣಬೆಳಗೊಳ-ಹಾಸನ ಮಾರ್ಗವಾಗಿ ಈ ರೈಲು ಸಂಚರಿಸಲಿದೆ. ಭಾನುವಾರ, ಮಂಗಳವಾರ ಮತ್ತು ಗುರುವಾರ ಬೆಂಗಳೂರಿಂದ ಮಂಗಳೂರಿಗೆ(ಬೆಳಗ್ಗೆ 7ಕ್ಕೆ ಯಶವಂತಪುರದಿಂದ ಹೊರಟು ಸಂಜೆ 5.45ಕ್ಕೆ ಮಂಗಳೂರು ತಲುಪಲಿದೆ) ಮತ್ತು ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಂಗಳೂರಿನಿಂದ ಬೆಂಗಳೂರಿಗೆ(ಬೆಳಗ್ಗೆ 11.15ಕ್ಕೆ ಹೊರಟು ರಾತ್ರಿ10ಕ್ಕೆ ಸೇರಲಿದೆ) ಸಂಚರಿಸಲಿದೆ.
ಈ ರೈಲು ಮಾರ್ಗ ಆರಂಭವಾದ ಬಳಿಕ ಮಂಗಳೂರಿನ ಸಂಚಾರ ಮಂಗಳೂರು ಮತ್ತು ಬೆಂಗಳೂರು ನಡುವೆ 87 ಕಿ.ಮೀನಷ್ಟು ಸಂಚಾರ ಕಡಿಮೆಯಾಗಲಿದ್ದು, 3 ಗಂಟೆ ಪ್ರಯಾಣದ ಸಮಯ ತಗ್ಗಲಿದೆ. ರಾತ್ರಿ ಸಂಚರಿಸುವ ಮಂಗಲೂರು ಮತ್ತು ಬೆಂಗಳೂರು ರೈಲು ಮೈಸೂರು ಮಾರ್ಗವಾಗಿ ಹೂಗುವುದರಿಂದ ಹೆಚ್ಚುವರಿ ಸುತ್ತಾಗುತ್ತಿದೆ.
ಬೆಳಗಿನ ರೈಲು: ಸದ್ಯ ಮಂಗಳೂರಿಗೆ ರಾತ್ರಿ ರೈಲು ಸಂಚಾರ ಮಾತ್ರವಿದ್ದು, ನಾಳೆಯಿಂದ ಆರಂಭವಾಗಲಿರುವ ಕುಡ್ಲ ಎಕ್ಸ್`ಪ್ರೆಸ್ ರೈಲು ಬೆಳಗಿನ ಹೊತ್ತು ಸಂಚರಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನರ ಹಲವು ದಿನಗಳ ಕನಸು ನನಸಾಗಿದೆ.
ರೈಲು ಬೆಳಗಿನ ಸಂಚಾರದಿಂದ ಮಾರ್ಗಮಧ್ಯೆ ಸಿಗುವ ಪ್ರಾಕೃತಿಕ ಸೌಂದರ್ಯ ಸವಿಯುವ ಅವಕಾಶ ಪ್ರಯಾಣಿಕರಿಗೆ ಸಿಗಲಿದೆ. ಬೆಟ್ಟಗುಡ್ಡ, ಗುಹೆಗಳು, ಝರಿಗಳನ್ನ ನೋಡುವ ಭಾಗ್ಯ ಸಿಗಲಿದೆ