ಅಪರೇಷನ್ ಕಮಲ ವಿಚಾರವಾಗಿ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದ್ದು,ಬಿಜೆಪಿ ಒಂದು ಬಾರಿ ಅಲ್ಲ ಅನೇಕ ಬಾರಿ ಬೇರೆ ಶಾಸಕರನ್ನ ದುಡ್ಡು ಕೊಟ್ಡು ಖರೀದಿ ಮಾಡಿದೆ.೨೦೦೮ ರಲ್ಲಿ ಇದೆ ೨೦೧೮ ರಲ್ಲಿ ಮಾಡಿತ್ತು.ಅವರ ಜಾಯಮಾನದಲ್ಲೇ ನಡೆದಿದೆ.ಮಹಾರಾಷ್ಟ್ರ ಗೋವಾ ರಾಜಸ್ಥಾನ ಎಲ್ಲಾ ಕಡೆ ಅಪರೇಷನ್ ಆಗಿದೆ.
ಎಲ್ಲಿ ಅಧಿಕಾರದಲ್ಲಿದ್ದಾರೆ ಅಲ್ಲಿ ಅಪರೇಷನ್ ಆಗಿದೆ.ಅವರ ಮುಖ್ಯಸ್ಥರೇ ಹೇಳಿದ್ದಾರೆ .ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡೋದು ಅವರ ಚಾಳಿ.ಬಿಜೆಪಿ ಅವರು ಸಂವಿಧಾನಕ್ಕೂ ಗೌರವ ಕೊಡಲ್ಲ.ವಾಮ ಮಾರ್ಗ ಅವರ ರಾಜ ಮಾರ್ಗ.ಅವರು ಅಸಾಧ್ಯವಾದದನ್ನು ಮಾಡ್ತಾರೆ.ಸಮಯ ಬಂದಾಗ ಪಕ್ಷದಲ್ಲಿ ಬಂದಾಗ ತೀಮಾರ್ನ ಮಾಡ್ತೇವೆ.ಜನರ ಕಲ್ಯಾಣ ಕಡೆ ಅಭಿವೃದ್ಧಿ ಕಡೆ ಇರಬೇಕು.ಬಹುಶ್ಹ ಜನರಿಗೆ ಒಳ್ಳೆದು ಆಗೋದನ್ನ ನೋಡಬೇಕು ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಅಧಿಕಾರ ಬರುತ್ತೆ ಹೋಗುತ್ತೆ.ಜನರಿಗೆ ಒಳ್ಳೆದು ಆಗೋದನ್ನ ನೋಡಿಕೊಳ್ಳಬೇಕು.ನೀವು ನಾವು ಸೇರಿ ಒಳ್ಳೆದು ಮಾಡೋಣ.ಜನರಿಗೆ ಸರ್ಕಾರ ಯಾವ ರೀತಿ ಕೆಲಸ ಮಾಡ್ತಿದೆ ಅನ್ನೋದು ಮುಖ್ಯ ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಬೇಳೂರು ಗೋಪಾಲಕೃಷ್ಣ ಹೇಳಿಕೆ ವಿಚಾರಕ್ಕೆ ಒಬ್ಬೋರದು ಒಂದು ಹೇಳಿಕೆ ಇದೆ.ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶವಿದೆ.ಪಕ್ಷ ಎಲ್ಲ ತೀರ್ಮಾನವನ್ನ ತೆಗೆದುಕೊಳ್ಳತ್ತೆ.ಪಕ್ಷವೂ ಎಲ್ಲವನ್ನ ನೋಡಿಕೊಳ್ಳುತ್ತೆ.ಪಕ್ಷದ ವರಿಷ್ಟರು ಸೂಕ್ತ ತೀರ್ಮಾನ ಕೈಗೊಳ್ಳತ್ತಾರೆ.ಎಲ್ಲಾ ರೀತಿಯ ಆಗುಹೋಗುಗಳನ್ನ ಗಮನಿಸಿಸುತ್ತಾರೆ.ಯಾವುದು ಒಳ್ಳೆದೋ ಅದನ್ನ ನಿರ್ಧಾರ ಮಾಡ್ತಾರೆ ಎಂದು ಕೃಷ್ಟ ಭೈರೇಗೌಡ ಹೇಳಿದ್ದಾರೆ.