Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೆ ಆರ್ ಪೇಟೆ ಬೈ ಎಲೆಕ್ಷನ್: ಕಣದಲ್ಲಿ ಫೈಟ್ ಮಾಡೋರು ಯಾರು ಗೊತ್ತಾ?

ಕೆ ಆರ್ ಪೇಟೆ ಬೈ ಎಲೆಕ್ಷನ್: ಕಣದಲ್ಲಿ ಫೈಟ್ ಮಾಡೋರು ಯಾರು ಗೊತ್ತಾ?
ಮಂಡ್ಯ , ಶನಿವಾರ, 3 ಆಗಸ್ಟ್ 2019 (15:40 IST)
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್. ಪೇಟೆಯ ಬೈ ಎಲೆಕ್ಷನ್ ಅಖಾಡದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ, ಚಲನಚಿತ್ರ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಚಿತ್ರನಟ ಅಭಿಷೇಕ್, ಸಂಸದೆ ಸುಮಲತಾ ಅಂಬರೀಶ್, ಮಾಜಿಪ್ರಧಾನಿ ದೇವೇಗೌಡರ ಪುತ್ರಿ ಡಾ.ಅನುಸೂಯ ಮಂಜುನಾಥ್, ಮಾಜಿ ಸಚಿವ ಚೆಲುವರಾಯಸ್ವಾಮಿ ಅವರ ಹೆಸರುಗಳು ಕೇಳಿ ಬರುತ್ತಿವೆ.

ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ನಾರಾಯಣಗೌಡ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ವರಿಷ್ಠರ ವಿರುದ್ಧ ತಿರುಗಿಬಿದ್ದು ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ. ಉಪಚುನಾವಣೆಯ ವಿಷಯದಲ್ಲಿ ದಿನಕ್ಕೊಂದು ವದಂತಿಗಳು ಹರಡುತ್ತಿವೆ.

ಸರ್ವೋಚ್ಚ ನ್ಯಾಯಾಲಯವು ಶಾಸಕ ನಾರಾಯಣಗೌಡರ ಅರ್ಹತೆಯನ್ನು ರದ್ದುಗೊಳಿಸಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಟ್ಟರೆ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧರಾಗುತ್ತಿರುವ ಶಾಸಕ ನಾರಾಯಣಗೌಡ ಬಿಜೆಪಿ ಹುರಿಯಾಳಾಗಿ ಸ್ಪರ್ಧೆ ಮಾಡಬಹುದು. ಕ್ಷೇತ್ರದಲ್ಲಿ ಸಧ್ಯ ತ್ರಿಕೋನ ಸ್ಪರ್ಧೆಯು ಏರ್ಪಟ್ಟಿದೆ. ಜೆಡಿಎಸ್ -ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹೋರಾಟ ಏರ್ಪಟ್ಟಿದ್ದು, ರಾಜ್ಯದ ಜನರ ಗಮನ ಸೆಳೆಯುತ್ತಿದೆ. ನಿಖಿಲ್ ಸ್ಪರ್ಧೆಯು ಯಾವ ಪರಿಣಾಮ ಬೀರುತ್ತವೆ, ಗೆಲುವಿನ ಸಾಧ್ಯಾಸಾಧ್ಯತೆಗಳನ್ನು ಅರಿಯಲು ಖುದ್ದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಇಂದು ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಿದ್ದರು. ಕಾರ್ಯಕರ್ತರ ಜೊತೆ ಸಂವಾದ ನಡೆಸಿ ಯಾರು ಅಭ್ಯರ್ಥಿಯಾದರೆ ಸೂಕ್ತ ಎಂಬ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ಯಡಿಯೂರಪ್ಪ ಅವರಿಗೂ ಜಿಲ್ಲೆಯಲ್ಲಿ ಕಮಲವನ್ನು ಅರಳಿಸಬೇಕು ಎಂಬ ಭಾರೀ ಪ್ರಯತ್ನದಲ್ಲಿದ್ದಾರೆ. ಒಟ್ಟಾರೆ ಕೆ.ಆರ್.ಪೇಟೆ ಕ್ಷೇತ್ರವು ರಾಜ್ಯದ ಜನರು ನಿರೀಕ್ಷಿಸುತ್ತಿರುವ ಹೈಟೆನ್ಷನ್ ಕಣವಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಕರೆಂಟ್ ಇಲ್ಲ ಅಂದ್ರೂ ಅದು ಸಿಕ್ಕೇ ಸಿಗುತ್ತೆ