ಸಿಎಲ್ ಪಿ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿರೋ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಬೆಳವಣಿಗೆಗಳು ಗರಿಗೆದರಿವೆ.
ಉಪ ಚುನಾವಣೆಯ ಫಲಿತಾಂಶ ಬಳಿಕ ಕಾಂಗ್ರೆಸ್ ನ ಉನ್ನತ ಹುದ್ದೆಗಳಿಗೆ ಮುಖಂಡರು ರಾಜೀನಾಮೆ ನೀಡಿದ್ದರು.
ಇದೀಗ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಬುಲಾವ್ ಎಂದಿರೋ ಕೈ ಪಾಳೆಯದ ಹೈಕಮಾಂಡ್, ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಲು ನಿರ್ಧರಿಸಿದಂತಿದೆ.
ಹೈಕಮಾಂಡ್ ಭೇಟಿ ಬಳಿಕವಷ್ಟೇ ಡಿಕೆ ಶಿವಕುಮಾರ್ ಗೆ ಯಾವ ಹುದ್ದೆ ಸಿಗಲಿದೆ ಅನ್ನೋದು ಪಕ್ಕಾ ಆಗಲಿದೆ.