ಕಾಂಗ್ರೆಸ್ ಪಾಳಯದಲ್ಲಿ ಅಸಮಧಾನಗೊಂಡಿರುವ ಹಿರಿಯ ನಾಯಕರ ಮುನಿಸನ್ನು ಕರಗಿಸುವ ಪ್ರಯತ್ನವಾಗಿ ಇಂದು ಪ್ರದೇಶ್ ಕಾಂಗ್ರೆಸ್ ಕಚೇರಿಯಲ್ಲಿ ಹಿರಿಯ ಮುಖಂಡರ ಸಭೆ ಕರೆಯಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಕಾರ್ಯವೈಖರಿ ಮತ್ತು ಪಕ್ಷದಲ್ಲಿನ ಕೆಲ ಬೆಳವಣಿಗೆಗಳ ಬಗ್ಗೆ ಇತ್ತೀಚಿಗೆ ಕೈ ಪಾಳೆಯದಿಂದಲೇ ಬಹಿರಂಗ ಅಸಮಧಾನ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ಪಕ್ಷದ ರಾಜ್ಯಾಧ್ಯಕ್ಷ ಕೆ. ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಹೆಚ್ಚುತ್ತಿರುವ ಮನಸ್ತಾಪವನ್ನು ಕೊನೆಗಾಣಿಸುವ ಪ್ರಯತ್ನ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಎಸ್.ಎಂ ಕೃಷ್ಣ ರಾಜೀನಾಮೆ ಬಳಿಕ ಎಚ್ಚೆತಂತಿರುವ ಕೈ ನಾಯಕರು ಹಿರಿಯ ನಾಯಕರ ಜತೆ ಸಭೆ ಸೇರಿ ಬೆಳೆಯುತ್ತಿರುವ ಅಸಮಧಾನವನ್ನು ತೊಡೆದು ಹಾಕಿ, ಎಲ್ಲರೂ ಒಂದಾಗಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧರಾಗಬೇಕಿದೆ ಎಂಬುದನ್ನು ಮನವರಿಕೆ ಮಾಡಿಸುವ ಯತ್ನಕ್ಕೆ ಕೈ ಹಾಕುವ ಸಾಧ್ಯತೆಗಳಿವೆ.