ಉಡುಪಿ ಕಾಲೇಜಿನಲ್ಲಿ ನಡೆದ ವಿಡಿಯೋ ಚಿತ್ರೀಕರಣ ಪ್ರಕರಣ ಗಂಭೀರವಾಗಿದ್ದು,6,7 ತಿಂಗಳಿನ ಹಿಂದೆ ನಡೆದಿದ್ದ ಈ ಘಟನೆ ಒಬ್ಬ ವಿಧ್ಯಾರ್ಥಿನಿ ಈ ರೀತಿ ಘಟನೆ ನಡೆದಿದೆ ಅಂತ ಹೇಳಿದ್ರೆ ಅವಳ ಮೇಲೆ ಕೇಸ್ ಹಾಕಲಿಕ್ಕೆ ಸರ್ಕಾರ ಮುಂದಾಗಿದೆ.ಇನ್ನೂ ಮೊಬೈಲ್ ಗಳು ಬದಲಾವಣೆ ಆಗ್ತಾನೆ ಇರುತ್ತವೆ.ಈ ಹಿನ್ನಲೆ ಪ್ರಕರಣದ ಹಿಂದೆ ಅಂತರಾಜ್ಯ ಕಿಡಗೇಡಿಗಳ ಕೈವಾಡ ವಿದೆಯಾ ಎಂಬ ಅನುಮಾನ ಕಾಡುತ್ತಿದೆ.ಆದ್ದರಿಂದ ಈ ಪ್ರಕರಣವನ್ನ ಎನ್ ಐ ಗೆ ಕೊಡಬೇಕು ಎಂದು ಸರ್ಕಾರಕ್ಕೆ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದ್ದಾರೆ.