ಬೆಂಗಳೂರು : ಸಾರಿಗೆ ನೌಕರರ ಬೇಡಿಕೆ ಈಡೇರಿಸದ ವಿಚಾರ ಸರ್ಕಾರದ ವಿರುದ್ಧ ಆಕ್ರೋಶಗೊಂಡು ಮತ್ತೆ ನೌಕರರು ಭುಗಿಲೆದ್ದಿದ್ದಾರೆ. ಇಂದು 4 ನಿಗಮಗಳ ನೌಕರರಿಂದ ಸಮಾಲೋಚನಾ ಸಭೆ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು, ದುಡಿಯುವ ಜನರನ್ನು 3 ಕಾಸಿಗೆ ದುಡಿಸಬೇಡಿ. ಈಗಾಗಲೇ ಸರ್ಕಾರದಿಂದ 3 ತಿಂಗಳು ಕಾಲಹರಣವಾಗಿದೆ. 6ನೇ ವೇತನ ಆಯೋಗ ಜಾರಿಗೆ ಹಣ ಮೀಸಲಿಡಿ. ಇದು ಕೊಟ್ಟ ಮಾತು ನೆನಪಿಸುವ ಸಮಾವೇಶ. ಮಾರ್ಚ್ 15ರಂದು ಗಡುವು ಮುಗಿಯಲಿದೆ. ಆ ನಂತರ ತೀವ್ರ ಸ್ವರೂಪದ ಹೋರಾ ನಡೆಸುತ್ತೇವೆ. ಮಾತಿಗೆ ತಪ್ಪಿದ ಮಕ್ಕಳು ನೀವು ಅಂತ ಹೇಳಿ. ಸಾರಿಗೆ ಇಲಾಖೆ ನಷ್ಟದಲ್ಲಿದೆ ಎಂದು ತಿಳಿಸಿದ್ದಾರೆ.