ಐಟಿ ಅಧಿಕಾರಿ ನಿರಂಜನ್ ಪುತ್ರ ಶರತ್ ಅಪಹರಣ ಪ್ರಕರಣ ದುರಂತ ಅಂತ್ಯ ಕಂಡಿದೆ. ಶರತ್ ಅಪಹರಣದ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರಿಂದ ಭಯಗೊಂಡ ಅಪಹರಣಕಾರರು ಆತನನ್ನ ಕೊಂದು ಹೂತಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶರತ್ ಅಕ್ಕನ ಸಹಪಾಠಿ ವಿಶಾಲ್ ಸಹಚರರ ಜೊತೆಸೇರಿ ಹಣಕ್ಕಾಗಿ ಸೆಪ್ಟೆಂಬರ್ 12ರಂದು ಶರತ್`ನನ್ನ ಅಪಹರಿಸಿ ಸ್ವಿಫ್ಟ್ ಕಾರಿನಲ್ಲಿ ಸುತ್ತಿಸಿದ್ದ. ವಾಟ್ಸಾಪ್ ವಿಡಿಯೋ ಮಾಡಿ ಮನೆಗೆ ಕಳುಹಿಸಿದ್ದ. ಹಣ ನೀಡದಿದ್ದರೆ ಇವರು ನನ್ನನ್ನ ಕೊಂದು ಬಿಡುತ್ತಾರೆ ಎಂದು ಶರತ್`ನಿಂದಲೇ ಹೇಳಿಸಿದ್ದ. ಬಳಿಕ ಪೊಲೀಸರಿಗೆ ಪೋಷಕರಿಗೆ ದೂರು ನೀಡಿದ್ದರು. ದೂರು ನೀಡಿದ ದಿನವೇ ದುಷ್ಕರ್ಮಿಗಳು ಶರತ್ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಕೊಲೆ ಮಾಡಿದ ಬಳಿಕ ಶವಕ್ಕೆ ಕಲ್ಲು ಕಟ್ಟಿ ರಾಮೋಹಳ್ಳಿ ಕೆರೆಗೆ ಹಾಕಿದ್ದರು. ಪ್ರತಿ ದಿನ ಶವ ತೇಲುತ್ತದೆಯೇ ಎಂದು ಪರೀಕ್ಷಿಸಲು ಕೆರೆಯ ಬಳಿಗೆ ಬಂದು ಹೋಗಿರುತ್ತಾರೆ. ಒಂದು ದಿನ ಶವ ತೇಲುತ್ತಿದ್ದದ್ದನ್ನ ಕಂಡು ಶವವನ್ನ ಮತ್ತೆ ಸ್ವಿಫ್ಟ್ ಕಾರಿನಲ್ಲಿ ಹಾಕಿಕೊಂಡು ಕೆರೆ ಪಕ್ಕದಲ್ಲಿ ಹೂತು ಹಾಕುತ್ತಾರೆ.ಕರೆಗಳ ಮಾಹಿತಿ ಆಧರಿಸಿದ ಪೊಲೀಸರು ವಿಸಾಲ್`ನನ್ನ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ, ಪೊಲೀಸರು ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ