ಕರೆಯದೇ ಇದ್ದರೂ ಮದುವೆ ಮನೆಗೆ ಹೋಗಿದ್ದವರು ಲಕ್ಷ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ತಮ್ಮ ಕೈಳಕ ತೋರಿ ಎಗರಿಸಿರೋ ಘಟನೆ ನಡೆದಿದೆ.
ವಧುವಿನ ತಾಯಿ ಹತ್ತಿರ ಇದ್ದ ಬ್ಯಾಗ್ ನ್ನು ಕದ್ದು ಮೂವರು ಅಪರಿಚಿತ ಯುವಕರು ಪರಾರಿಯಾಗಿದ್ದಾರೆ. ಆ ಬ್ಯಾಗಿನಲ್ಲಿ 72 ಸಾವಿರ ಮೌಲ್ಯದ ನೆಕ್ಲೆಸ್ ಹಾಗೂ ನಗದು ಅಲ್ಲದೇ ಎರಡು ಮೊಬೈಲ್ ಗಳಿದ್ದವು.
ಚಂಡೀಗಢದಲ್ಲಿ ಈ ಘಟನೆ ನಡೆದಿದ್ದು, ಖತರ್ನಾಕ್ ಮೂವರು ಕಳ್ಳರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.