ಬೆಂಗಳೂರು: ಕೊರೋನಾ ಸೋಂಕು ಎಲ್ಲೆಲ್ಲಿ ಇದೆಯೋ, ಯಾವ ವಸ್ತುವಿಗೆ ಅಂಟಿಕೊಂಡಿದೆಯೋ ಗೊತ್ತಿರಲ್ಲ. ಹೀಗಾಗಿ ಮನೆಗೆ ತರುವ ಹಣ್ಣು-ತರಕಾರಿ, ಹಾಲು ಇತ್ಯಾದಿಗಳನ್ನು ಸರಿಯಾಗಿ ಶುಚಿಗೊಳಿಸಿಯೇ ಬಳಸಬೇಕು.
ಹಾಲು ಉಪಯೋಗಿಸುವ ಮುನ್ನ ಐದು ನಿಮಿಷ ನೀರಿನಲ್ಲಿ ಮುಳುಗಿಸಿ ಬಳಿಕ ಪ್ಯಾಕೆಟ್ ಚೆನ್ನಾಗಿ ತೊಳೆದುಕೊಂಡೇ ಬಳಸಿದರೆ ಉತ್ತಮ.
ಇನ್ನು, ಹಣ್ಣು ತರಕಾರಿಗಳನ್ನು ತಂದ ಕೂಡಲೇ ಉಪ್ಪು ಹಾಕಿದ ನೀರಿನಲ್ಲಿ ಕೆಲವು ಹೊತ್ತು ನೆನೆಸಿ ನಂತರ ಶುಚಿಗೊಳಿಸಿ ಫ್ರಿಡ್ಜ್ ನಲ್ಲಿಟ್ಟುಕೊಳ್ಳಿ. ಮತ್ತೆ ಉಪಯೋಗಿಸುವಾಗ ಮತ್ತೊಮ್ಮೆ ಚೆನ್ನಾಗಿ ತೊಳೆದುಕೊಂಡೇ ಬಳಸಿ. ಸಾಧ‍್ಯವಾದಷ್ಟು ತೊಳೆದು ಉಪಯೋಗಿಸಬಹುದಾದ ವಸ್ತುಗಳನ್ನು ತೊಳೆದೇ ಬಳಸಿ.