ನಗರದ ಆಸ್ಪತ್ರೆಗಳಲ್ಲಿ ಈಗ ಎಲ್ಲಿ ನೋಡಿದ್ರು ಬೇರೆ ಮಕ್ಕಳೇ ಕಾಣ್ತಾರೆ. ಮಕ್ಕಳು ಕೆಮ್ಮು ಜ್ವರ, ಶೀತದಿಂದ ಬಾಳಲುತ್ತಿದ್ದು, ಆಸ್ಪತ್ರೆಯಲ್ಲಿ ಕಾಲಿಡಲಾಗದ ಮಟ್ಟಿಗೆ ಮಕ್ಕಳು ತುಂಬಿದ್ದಾರೆ. ನಗರದ ಕೆಲವೊಂದು ಆಸ್ಪತ್ರೆಗಳಲ್ಲಿ ಬೆಡ್ ಸಿಗುವುದು ಕೂಡ ಕಷ್ಟವಾಗೋಗಿದೆ. ಹೀಗಾಗಿ ಪೋಷಕರು ಆತಂಕ ಶುರುವಾಗಿದೆ.ನಗರದ ಆಸ್ಪತ್ರೆಗಳಲ್ಲಿ ಮಕ್ಕಳ ಪ್ರಕರಣ ಹೆಚ್ಚಾಗ್ತಿದೆ. ಮಕ್ಕಳು ಕೆಮ್ಮು, ಜ್ವರ , ಶೀತದಿಂದ ಬಾಳುತ್ತಿದ್ದು, ಎಲ್ಲ ಕೊರೊನಾ ಲಕ್ಷಣವನ್ನೇ ಹೊಂದಿದ್ದಾರೆ. ಆದ್ರೆ ಕೋವಿಡ್ ಪರೀಕ್ಷೆಗೆ ಮಕ್ಕಳನ್ನ ಒಳಪಡಿಸಿದಾಗ ಮಕ್ಕಳಿಗೆ ಕೊರೊನಾ ಬದಲಿಗೆ ಬೇರೆ ಬೇರೆ ರೋಗಗಳು ಉಲ್ಬಣಿಸುತ್ತಿರುವುದು ಗೊತ್ತಾಗ್ತಿದೆ. ಆದ್ರಲ್ಲೂ ಈಗ ಮಕ್ಕಳಲ್ಲಿ ನ್ಯೂಮೋನಿಯಾ , ಡೆಂಘ್ವಿ ಫೀವರ್ ಹೆಚ್ಚಾಗ್ತಿದೆ. ಕೊರೊನಾ ಪ್ರಕರಣ ಹೆಚ್ಚಾಗುವ ಟೈಮ್ ನಲ್ಲಿ ಈ ಡೆಂಘ್ವಿ ಜ್ವರ ಪೋಷಕರಲ್ಲಿ ಆತಂಕ ಉಂಟುಮಾಡಿದೆ. ಆಸ್ಪತ್ರೆಯಲ್ಲಿ ಈಗ ಬೆಡ್ ಸಿಗುವುದಕ್ಕೂ ಕೂಡ ಪರದಾಡುವಂತಾಗಿದೆ. ಕೆಸಿ ಜನರಲ್ ಆಸ್ಪತ್ರೆಯಂತೂ ಮಕ್ಕಳಿಂದ ತುಂಬಿ ಹೋಗಿದೆ. ಮಕ್ಕಳ ಕೇಸ್ ಸ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಹೊರೆತು ಕಡಿಮೆ ಮಾತ್ರ ಆಗ್ತಿಲ್ಲ.ಒಂದು ಕಡೆ ಕೊರೊನಾ ಹೆಚ್ಚಾಗ್ತಿದೆ ಮತ್ತೊಂದು ಕಡೆ ಮಕ್ಕಳಲ್ಲಿ ಹಲವು ರೋಗ-ರುಜ್ಜಿನೆಗಳು ಕಾಣಿಸಿಕೊಳ್ತಿದೆ. ಇನ್ನು ನಗರದ ಕೆಸಿ ಜನರಲ್ ಆಸ್ಪತ್ರೆಗಳ ಮಕ್ಕಳ ವಿಭಾಗದಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈಗ ಎಲ್ಲ ಕೋವಿಡ್ ಲಕ್ಷಣ ಕಂಡುಬರುತ್ತಿರುವದರಿಂದ ಮಕ್ಕಳಿಗೆ ಲಸಿಕೆ ಹಾಕಿಸಿಲ್ವಾಲ್ಲ ಅಂತಾ ಪೋಷಕರಂತೂ ಭಯಭಿತಗೊಂಡಿದ್ದಾರೆ. ಆದ್ರೆ ಮಕ್ಕಳ ತಜ್ಷರು ಮಾತ್ರ ಈಗ ಮಳೆಗಾಲವಾದರಿಂದ ಮಕ್ಕಳ ಆರೋಗ್ಯ ಹದಗೆಡುತ್ತಿದೆ. ಭಯಪಾಡುವ ಅವಶ್ಯಕತೆ ಇಲ್ಲ ಅಂತಿದ್ದಾರೆ. ಇನ್ನು ಸಾಮಾನ್ಯವಾಗಿ ಜೂನ್ -ಜುಲೈ ನ್ಯೂಮೋನಿಯಾ , ಜ್ವರ ಹೆಚ್ಚಾಗುತ್ತೆ. ಈಗ ಡೆಂಘ್ವಿ ಪ್ರಕರಣ ಶೇ 30 ರಿಂದ 40 ರಷ್ಟು ಹೆಚ್ಚಾಗಿದ್ದು. ಇನ್ಮುಂದೆ ಆಗಸ್ಟ್ , ಸೆಪ್ಟಂಬರ್ ನಲ್ಲಿ ಮತ್ತಷ್ಟು ಪ್ರಕರಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೆ ಸಿ ಜನರಲ್ ಆಸ್ಪತ್ರೆಯ ಮಕ್ಕಳ ತಜ್ಷ ರಘುನಂದನ್ ಹೇಳಿದ್ದಾರೆ.