ಕನ್ನಡಿಗರಿಗೆ ಹಲವು ಭಾಗ್ಯಗಳನ್ನು ನೀಡಿದ್ದ ಕರ್ನಾಟಕ ಸರಕಾರ, ಇದೀಗ ಕಾವೇರಿ ಹೋರಾಟದಲ್ಲಿ ದಾಂದಲೆ ಮಾಡಿರುವ ಆರೋಪದ ಮೇಲೆ ಹೋರಾಟಗಾರರಿಗೆ ಜೈಲು ಭಾಗ್ಯ ನೀಡಿದೆ.
ಕಾವೇರಿ ಹೋರಾಟದಲ್ಲಿ ದಾಂದಲೆ ಮಾಡಿರುವ ಆರೋಪದಲ್ಲಿ 1 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಿರುವ ಪೊಲೀಸರು, ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಆದರೆ, ಎಸಿಎಂಎಂ ಕೋರ್ಟ್ ಹೋರಾಟದಲ್ಲಿ ಬಂಧಿತರಿಗೆ ಬೇಲ್ ನೀಡಲು ನಿರಾಕರಿಸಿದೆ.
ಬಂಧಿತರನ್ನು ಬಂಧನದಲ್ಲಿಡಲು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರ್ಯಾಗಾರದಲ್ಲಿ ಎರಡು ಹೊಸ ಬ್ಯಾರಕ್‌ಗಳನ್ನು ಸಿದ್ಧ ಪಡಿಸಲು ಜೈಲು ಅಧಿಕಾರಿಗಳು ಮುಂದಾಗಿದ್ದಾರೆ.
ಕಾವೇರಿ ನದಿಯಿಂದ ತಮಿಳು ನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹಾಗೂ ತಮಿಳುನಾಡಿನಲ್ಲಿ ನಡೆದ ಕನ್ನಡಿಗರ ಮೇಲಿನ ದೌರ್ಜನ್ಯವನ್ನು ಖಂಡಿಸಿ ರಾಜ್ಯದಲ್ಲಿ ಉಗ್ರ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ಆಕ್ರೋಶಗೊಂಡ ಹೋರಾಟಗಾರರು ರಾಜ್ಯದ್ಯಂತ ಗಲಭೆಯ ವಾತಾವರಣ ಸೃಷ್ಟಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ