Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ನಾಟಕ ಕುಸ್ತಿ ಹಬ್ಬ ಫೆ. 22 ರಿಂದ ಶುರು

ಕರ್ನಾಟಕ ಕುಸ್ತಿ ಹಬ್ಬ ಫೆ. 22 ರಿಂದ ಶುರು
ಕಲಬುರಗಿ , ಮಂಗಳವಾರ, 18 ಫೆಬ್ರವರಿ 2020 (20:33 IST)
ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಸಹಯೋಗದಲ್ಲಿ ಕುಸ್ತಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಸಹಯೋಗದಲ್ಲಿ ಫೆಬ್ರವರಿ 22 ರಿಂದ 25 ರವರೆಗೆ 4 ದಿನಗಳ ಕಾಲ ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಹಮ್ಮಿಕೊಂಡಿದೆ.

ದೇಶದ ಹೆಸರಾಂತ ಸುಮಾರು 1200 ಕ್ಕೂ ಹೆಚ್ಚು ಕುಸ್ತಿಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿವಿಧ 3 ಅಖಾಡಗಳಲ್ಲಿ 30 ಪ್ರತ್ಯೇಕ ತೂಕಗಳ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

80 ಲಕ್ಷ ರೂ. ಮೌಲ್ಯದ ನಗದು ಬಹುಮಾನ, ಪಾರಿತೋಷಕಗಳನ್ನು ನೀಡಲಾಗುವುದು.

ಅಜರ್‍ಬೈಜಾನ್, ಜಾರ್ಜಿಯಾ,ಇರಾನ್ ದೇಶಗಳ ಕುಸ್ತಿಪಟುಗಳ ಜೊತೆಗೆ ಭಾರತದ ಪದ್ಮಶ್ರೀ, ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ,  ಒಲಂಪಿಕ್ ಪಂದ್ಯ ವಿಜೇತ್, ಯೋಗೇಶ್ವರ ದತ್, ಪದ್ಮ ಶ್ರೀ, ಅರ್ಜುನ್ ಪ್ರಶಸ್ತಿ ವಿಜೇತರು ಹಾಗೂ ನಿವೃತ್ತ ಐಜಿಪಿ ಕರ್ತಾರ ಸಿಂಗ್,ಪದ್ಮಶ್ರೀ, ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ ಒಲಂಪಿಕ್ ಪದಕ ವಿಜೇತ ಸಾಕ್ಷಿ ಮಲಿಕ್, ಅಂತರಾಷ್ಟ್ರೀಯ ಕುಸ್ತಿಪಟು ಮಹ್ಮದ ಮುರಾಡಿ, ಭಾರತ ಕೇಸರಿ ಉಮೇಶ ಚೌದರಿ, ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳಾದ ಅಂಶು ಮಲ್ಲಿಕ್, ಜೈಲಾ ನಾಗೀಜಡೆ, ನೈನಾ, ಸಭೀರಾ ಅಲಿಯೆವಾ ಅಲಹವರ್ಡಿ ಮೊದಲಾದ ಹೆಸರಾಮತ ಕುಸ್ತಿ ಪಟುಗಳು ಈ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡ್ರಾಪ್ ನೀಡಿದ್ದ ಮಹಿಳೆ ಮೇಲೆ ಮೂವರಿಂದ ಅತ್ಯಾಚಾರ