Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಶ್ವಾಸ ಮತ ಯಾಚನೆಯೊಂದಿಗೆ ಮುಗಿಯೋದಿಲ್ಲ ರಾಜ್ಯ ರಾಜಕೀಯ ಚದುರಂಗದಾಟ!

ವಿಶ್ವಾಸ ಮತ ಯಾಚನೆಯೊಂದಿಗೆ ಮುಗಿಯೋದಿಲ್ಲ ರಾಜ್ಯ ರಾಜಕೀಯ ಚದುರಂಗದಾಟ!
ಬೆಂಗಳೂರು , ಗುರುವಾರ, 18 ಜುಲೈ 2019 (09:39 IST)
ಬೆಂಗಳೂರು: ಅತೃಪ್ತ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಇಂದು ಸದನದಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಒಂದು ವೇಳೆ ವಿಶ್ವಾಸ ಮತದಲ್ಲಿ ಸೋಲಾಗಿ ಸರ್ಕಾರ ಉರುಳಿದ ಮಾತ್ರಕ್ಕೆ ರಾಜ್ಯದ ರಾಜಕೀಯ ಚದುರಂಗದಾಟ ನಿಲ್ಲೋದಿಲ್ಲ.


ಇದು ಮತ್ತೊಂದು ನಾಟಕಕ್ಕೆ ತಿರುವು ಪಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಹುಮತ ಕಳೆದುಕೊಂಡು ಸರ್ಕಾರ ಉರುಳಿದರೆ, ತತ್ ತಕ್ಷಣವೇ ಬಿಜೆಪಿ ಅಧಿಕಾರಕ್ಕೇರುವುದು ಎಂದರ್ಥವಲ್ಲ.

ಮತ್ತೆ ಬಿಜೆಪಿ ಬಹುಮತ ಸಾಬೀತಿಗೆ ಶಾಸಕರನ್ನು ಸೆಳೆಯುವ ಯತ್ನ ಮಾಡಬೇಕು. ಆಗ ಮತ್ತೆ ರೆಸಾರ್ಟ್ ರಾಜಕಾರಣ ಶುರುವಾಗಲಿದೆ. ಒಂದು ವೇಳೆ ಬಿಜೆಪಿಯೂ ಬಹುತಮ ಸಾಬೀತುಪಡಿಸಲು ವಿಫಲವಾದರೆ ರಾಜ್ಯ ರಾಷ್ಟ್ರಪತಿ ಆಡಳಿತದ ತೆಕ್ಕೆಗೆ ಬಿದ್ದರೂ ಅಚ್ಚರಿಯಿಲ್ಲ. ಹೀಗಾಗಿ ಇಂದಿನ ವಿಶ್ವಾಸ ಮತ ಯಾಚನೆ ಬಳಿಕ ರಾಜಕೀಯ ನಾಟಕದ ಮತ್ತೊಂದು ಅಧ್ಯಾಯದ ಆರಂಭವಾಗುವುದಂತೂ ನಿಶ್ಚಿತ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಆಪ್ ಮೊಬೈಲ್ ಅಪ್ಲಿಕೇಶನ್ ಬಳಸುವ ಮುನ್ನ ಈ ಬಗ್ಗೆ ಎಚ್ಚರವಿರಲಿ