ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಸಂಬಂಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ವಿಷಾದ ಕೋರಿದ್ದೂ ಅಲ್ಲದೇ ತಮ್ಮ ಹೇಳಿಕೆಯನ್ನು ಹಿಂ
ಪಡೆಯುತ್ತೇನೆ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಹೌದು ಬೆಂಗಳೂರು ಹೊರವಲಯದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವ ವೇಳೆ ನನ್ನ ಹೇಳಿಕೆಯಿಂದ ಬೇಸರ ಆಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಜೊತೆಗೆ ಹೇಳಿಕೆಯನ್ನು ಹಿಂಪಡೆಯುವ ಮೂಲಕ ವಿವಾದ ಮುಕ್ತಾಯಗೊಳಿಸಲು ಬಯಸುತ್ತೇನೆ ಎಂದಿದ್ದಾರೆ.
ಮನನೊಂದು ಯುವತಿ ರಾತ್ರಿ ವೇಳೆ ಘಟನಾ ಸ್ಥಳಕ್ಕೆ ಹೋಗಬಾರದಿತ್ತು. ಕಾಂಗ್ರೆಸ್ಸಿಗರು ಗೃಹ ಸಚಿವರನ್ನು ಅತ್ಯಾಚಾರ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದೆನೆ. ಮಾತ್ರವಲ್ಲದೆ ಸಂತ್ರಸ್ತೆ ನನ್ನ ಮಗಳಂತೆ ಭಾವಿಸಿ ಹಾಗೇ ಹೇಳಿಕೆ ನೀಡಿದ್ದೇನೆ. ನನ್ನ ಹೇಳಿಕೆಯಿಂದ ಬೇಸರ ಆಗಿದ್ದರೆ ವಿಷಾದ ವ್ಯಕ್ತಪಡಿಸುತ್ತೆನೆಂದು ಮಾಧ್ಯಮಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟೀಕರಣ ನೀಡಿದ್ದಾರೆ.
ಇನ್ನೂ ಕಾಂಗ್ರೆಸ್ ರಾಜೀನಾಮೆ ಆಗ್ರಹ ವಿಚಾರವಾಗಿ ಮಾತನಾಡಿ ಅವರು ವಿರೋಧ ಪಕ್ಷದವರು, ಅವರಿಗೆ ಟೀಕೆ ಮಾಡುವ ಹಕ್ಕಿದೆ, ಅದು ಅವರ ಹಕ್ಕು ಮಾಡಿಕೊಳ್ಳಲಿ. ಯಾರ ಬಗ್ಗೆ ಹೆಚ್ಚು ಹೇಳುವುದಿಲ್ಲ, ಹೋಂ ಡಿಪಾರ್ಟ್ ಕೆಲಸ ಮಾಡಿದ ಹಿರಿಯರಿದ್ದಾರೆ ಅವರು ಕ್ಲಾರಿ ಫೈ ಮಾಡುತ್ತಾರೆ ಅಂತ ಅಂದುಕೊಳ್ತೇನೆ ಎಂದ ಅವರು ಅತ್ಯಾಚಾರ ಪ್ರಕರಣವನ್ನು ಮುಖ್ಯಮಂತ್ರಿ ಹೆಗಲಿಕೆ ಹಾಕಿದಂತಿತ್ತು. ಜೊತೆಗೆ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವ ಭರವಸೆ ಇದ್ದು, ನಮ್ಮ ಪೊಲೀಸರ ಕೈ ಮೇಲಾಗುತ್ತೆ. ಯಾರೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಅವರಿಗೆ ಶಿಕ್ಷೆ ಆಗೋವರೆಗೂ ವಿಶ್ರಮಿಸುವುದಿಲ್ಲ. ನಾನೊಬ್ಬ ಗೃಹಸಚಿವನಾಗಿ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಅವರು ವಿವರಿಸಿದ್ದಾರೆ.
ಮುಖ್ಯಮಂತ್ರಿಗಳು ಕೂಡ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.ಯಾರಿಗೂ ಆತಂಕ ಬೇಡ, ಬೊಮ್ಮಾಯಿ ಸರ್ಕಾರ ಜನರ ಮಾನ ಪ್ರಾಣ ಕಾಪಾಡುವ ಬದ್ದತೆಯನ್ನು ಹೊಂದಿದೆ. ಇಬ್ಬರು ಕೂಡ ಶಾಕ್ ನಿಂದ ಹೊರ ಬರುತ್ತಿಲ್ಲ. ಅವರಿಬ್ಬರ ಹೇಳಿಕೆ ಬಹಳ ಮುಖ್ಯ. ಮೈಸೂರಿನ ಪೊಲೀಸರು ಹಾಗೂ ಬೆಂಗಳೂರಿನಿಂದ ಹೋಗಿರುವ ಪೊಲೀಸರು ಇದನ್ನು ಛಾಲೆಂಜ್ ಆಗಿ ತೆಗೆದುಕೊಂಡಿದ್ದಾರೆ. ಪತ್ತೆ ಹಚ್ಚುವ ಎಲ್ಲಾ ಪ್ರಯತ್ನ ನಡೀತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.