ಸಿಎಂ ಸಿದ್ದರಾಮಯ್ಯರಿಗೆ ರಕ್ತಗತವಾಗಿ ಬಂದಿರುವುದು ಜಾತಿ, ಧರ್ಮ ಸಂಘರ್ಷ. ಲಿಂಗಾಯತ ಸಮುದಾಯವನ್ನೇ ಹೊಡೆಯಲು ಮುಂದಾಗಿದ್ದರು ಎಂದು ವಿಪಕ್ಷ ನಾಯಕ R. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕವೇ ನಾಚಿಕೆ ಪಡುವ ಸಂಗತಿ ನಡೆಯುತ್ತಿವೆ. ಬೆಳಗಾವಿ ಬೆತ್ತಲೆ ಪ್ರಕರಣ, ಭ್ರೂಣ ಹತ್ಯೆ, ಮಾಲೂರಿನ ಮಲಗುಂಡಿಸ್ವಚ್ಛ ಪ್ರಕರಣ. ಇವೆಲ್ಲಾ ಸರ್ಕಾರ ಸತ್ತು ಹೋಗಿರುವುದಕ್ಕೆ ಸಾಕ್ಷಿಯಾಗಿದೆ..ಇವನ್ನೆಲ್ಲಾ ಮರೆಮಾಚಲು ಸಿಎಂ ಹಿಜಾಬ್ ಅಸ್ತ್ರ ಹುಡುಕಿದ್ದಾರೆ.