Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ನಾಟಕದಲ್ಲಿ ಇದ್ದ ಮೇಲೆ ಕನ್ನಡ ಬೋರ್ಡ್ ಹಾಕಲು ಏನು ಪ್ರಾಬ್ಲಂ: ಕನ್ನಡ ವಿರೋಧಿಸಿದ ಕಂಪನಿಗೆ ಹೈಕೋರ್ಟ್ ಹೇಳಿದ್ದೇನು

Karnataka High Court

Krishnaveni K

ಬೆಂಗಳೂರು , ಶುಕ್ರವಾರ, 25 ಅಕ್ಟೋಬರ್ 2024 (10:41 IST)
ಬೆಂಗಳೂರು: ಕನ್ನಡ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದ ಕಂಪನಿಗೆ ಹೈಕೋರ್ಟ್ ತಕ್ಕ ಉತ್ತರ ನೀಡಿದೆ. ಕರ್ನಾಟಕದಲ್ಲಿ ಕನ್ನಡ ಬೋರ್ಡ್ ಕಡ್ಡಾಯವಾಗಿ ಇರಲೇಬೇಕು ಎಂದಿದೆ.

ಕರ್ನಾಟಕದಲ್ಲಿ ವ್ಯಾಪಾರ, ವಹಿವಾಟು ಮಾಡುತ್ತೀರಿ ಎಂದಾದರೆ ಕನ್ನಡ ನಾಮಫಲಕ ಹಾಕಲು ಏನು ಸಮಸ್ಯೆ ಎಂದು ಕೋರ್ಟ್ ಪ್ರಶ್ನೆ ಮಾಢಿದೆ. ಕರ್ನಾಟಕದಲ್ಲಿದ್ದ ಮೇಲೆ ನಾಮಫಲಕಗಳನ್ನು ಕನ್ನಡದಲ್ಲಿಯೇ ಹಾಕಬೇಕು ಎಂದು ಪ್ರಶ್ನೆ ಮಾಡಿ ಕೋರ್ಟ್ ಮೆಟ್ಟಿಲೇರಿದ ಖಾಸಗಿ ಕಂಪನಿಗಳಿಗೆ ಖಡಕ್ ಆಗಿ ತಾಕೀತು ಮಾಡಿದೆ.

ವಾಣಿಜ್ಯ, ವ್ಯವಹಾರ ನಡೆಸುವ ಅಂಗಡಿಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದನ್ನು ಸಮರ್ಥಿಸಿ ಮಾರ್ಚ್ 18 ರಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ರೀಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಆದಿತ್ಯಾ ಬಿರ್ಲಾ ಫ್ಯಾಷನ್ ಆಂಡ್ ರೀಟೇಲ್ ಲಿಮಿಟೆಡ್ ಸೇರಿದಂತೆ 24 ಖಾಸಗಿ ಕಂಪನಿಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಆದರೆ ಈ ಕಂಪನಿಗಳಿಗೆ ಈಗ ಹೈಕೋರ್ಟ್ ತೀರ್ಪು ಮತ್ತೊಮ್ಮೆ ತಪರಾಕಿ ನೀಡಿದಂತಾಗಿದೆ. ಕರ್ನಾಟಕದಲ್ಲಿ ವ್ಯವಹಾರ ನಡೆಸುವ ಎಲ್ಲಾ ಕಂಪನಿಗಳು ಕನ್ನಡದಲ್ಲೇ ವ್ಯವಹರಿಸಬೇಕಾಗುತ್ತದೆ ಎಂದಿದೆ. ಕನ್ನಡ ಬಳಸಬೇಕು ಎಂದು ಬಲವಂತ ಮಾಡುವಂತಿಲ್ಲ.ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಖಾಸಗಿ ಕಂಪನಿಗಳು ಆಕ್ಷೇಪಿಸಿದ್ದವು.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯ 8 ಶಾಸಕರು ಕಾಂಗ್ರೆಸ್ ಸೇರಲು ರೆಡಿ: ಎಸ್ ಟಿ ಸೋಮಶೇಖರ್ ಬಾಂಬ್