Webdunia - Bharat's app for daily news and videos

Install App

ಕರ್ನಾಟಕ ಹೈಕೋರ್ಟ್: ಹೈಬ್ರೀಡ್ ಮಾದರಿಯಲ್ಲಿ ರಜಾಕಾಲದ ಕಾರ್ಯನಿರ್ವಹಣೆ

Webdunia
ಭಾನುವಾರ, 19 ಡಿಸೆಂಬರ್ 2021 (21:06 IST)
ವರ್ಷಾಂತ್ಯದ ಚಳಿಗಾಲದ ರಜೆಯ ಹಿನ್ನೆಲೆಯಲ್ಲಿ ಡಿಸೆಂಬರ್‌ 24ರಿಂದ ಮುಂದಿನ ವರ್ಷದ ಜನವರಿ 1ರ ವರೆಗೆ ಕರ್ನಾಟಕ ಹೈಕೋರ್ಟ್‌ ಕಾರ್ಯನಿರ್ವಹಿಸುವುದಿಲ್ಲ. ಈ ಅವಧಿಯಲ್ಲಿ ದೈನಂದಿನ ಕಲಾಪ ಇರುವುದಿಲ್ಲ ಎಂದು ನ್ಯಾಯಿಕ ರಿಜಿಸ್ಟ್ರಾರ್‌ ಕೆ ಎಸ್‌ ಭರತ್‌ ಕುಮಾರ್‌ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಅಗತ್ಯದ ತುರ್ತು ಪ್ರಕರಣಗಳನ್ನು ಆಲಿಸಲು ರಜಾಕಾಲೀನ ಪೀಠಗಳು ಡಿ. 29ರಂದು ಕಾರ್ಯನಿರ್ವಹಿಸಲಿವೆ. ಬೆಂಗಳೂರು ಪೀಠದಲ್ಲಿ ಪ್ರಕರಣಗಳನ್ನು ಹೈಬ್ರಿಡ್‌ ಮಾದರಿಯಲ್ಲಿ, ಧಾರವಾಡ ಮತ್ತು ಕಲಬುರ್ಗಿ ಪೀಠಗಳ ಪ್ರಕರಣಗಳನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಯಲಿದೆ.
ಬೆಂಗಳೂರು ಪ್ರಧಾನ ಪೀಠದಲ್ಲಿ ಡಿಸೆಂಬರ್‌ 29ರಂದು ಬೆಳಗ್ಗೆ 10.30ರಿಂದ ನ್ಯಾ. ಕೃಷ್ಣ ದೀಕ್ಷಿತ್‌ ಮತ್ತು ನ್ಯಾ. ಅನಂತ್ ರಾಮನಾಥ್ ಹೆಗ್ಡೆ ನೇತೃತ್ವದ ವಿಭಾಗೀಯ ರಜಾ ಕಾಲೀನ ಪೀಠವು ಧಾರವಾಡ ಮತ್ತು ಕಲಬುರ್ಗಿ ಪೀಠ ಸೇರಿದಂತೆ ಎಲ್ಲಾ ವಿಭಾಗೀಯ ಪೀಠಗಳ ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿದೆ.
ನ್ಯಾ. ಬಿ ಎಂ ಶ್ಯಾಮ್‌ ಪ್ರಸಾದ್‌, ನ್ಯಾ. ಇ ಎಸ್‌ ಇಂದ್ರೇಶ್, ನ್ಯಾ. ವಿ ಶ್ರೀಶಾನಂದ ಮತ್ತು ನ್ಯಾ. ಎಂ ಜಿ ಎಸ್‌ ಕಮಲ್ ನೇತೃತ್ವದ ಏಕಸದಸ್ಯ ಪೀಠವು ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿದೆ.
ಮೊದಲ ಪ್ಯಾರಾದಲ್ಲಿ ಮನವಿ ಯಾ ಮೇಲ್ಮನವಿ ತುರ್ತಿನ ಕುರಿತು ಉಲ್ಲೇಖ ಇರಬೇಕು. ತುರ್ತಿಗೆ ಕಾರಣವನ್ನು ನೀಡದಿದ್ದರೆ ಅಂಥ ಪ್ರಕರಣಗಳನ್ನು ರಜಾಕಾಲೀನ ಪೀಠಗಳ ಮುಂದೆ ವಿಚಾರಣೆಗೆ ನಿಗದಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ತಡೆಯಾಜ್ಞೆ, ಮಧ್ಯಂತರ ನಿರ್ದೇಶನಗಳು ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಹೊರತುಪಡಿಸಿ ಸಿವಿಲ್‌ ಪ್ರಕರಣಗಳಿಗೆ ಸಂಬಂಧಿಸಿದ ಮೇಲ್ಮನವಿ, ಅರ್ಜಿಗಳ ವಿಚಾರಣೆಗೆ ನಿಗದಿಪಡಿಸುವುದಿಲ್ಲ. ಕ್ರಿಮಿನಲ್‌ ಮೇಲ್ಮನವಿ, ಕ್ರಿಮಿನಲ್‌ ಆದೇಶ ಮರುಪರಿಶೀಲನಾ ಮನವಿ, ಕ್ರಿಮಿನಲ್‌ ಮನವಿಗಳನ್ನು ತುರ್ತು ಆದೇಶದ ಹೊರತಾಗಿ ಸ್ವೀಕರಿಸಲಾಗುವುದಿಲ್ಲ.
ಧಾರವಾಡ ಮತ್ತು ಕಲಬುರ್ಗಿ ಪೀಠಕ್ಕೆ ಸಂಬಂಧಿಸಿದ ಪ್ರಕರಣಗಳ ತರ್ತು ವಿಚಾರಣೆಗೆ ಡಿಸೆಂಬರ್‌ 24 ಮತ್ತು 27ರಂದು ಅರ್ಜಿ ಸಲ್ಲಿಸಬಹುದಾಗಿದ್ದು, ಬೆಂಗಳೂರಿನ ಪ್ರಧಾನ ಪೀಠಕ್ಕೆ ಸಂಬಂಧಿಸಿದ ತುರ್ತು ಮನವಿಗಳನ್ನು ಡಿಸೆಂಬರ್‌ 27 ಮತ್ತು 28ರಂದು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments