ಬೆಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ಹಿನ್ನಲೆಯಲ್ಲಿ ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ ಅರ್ಧಕ್ಕೇ ಮೊಟಕುಗೊಳಿಸಲಾಗಿತ್ತು.
ಅಪರಾಹ್ನ ಪಕ್ಷದ ಮುಖಂಡರೊಂದಿಗೆ ಮುಂಬರುವ ಚುನಾವಣೆಯ ಕಾರ್ಯತಂತ್ರದೊಂದಿಗೆ ಚರ್ಚಿಸಲು ರಾಹುಲ್ ಸಭೆ ಕರೆದಿದ್ದರು. ಹೀಗಾಗಿ ಉಭಯ ಸದನಗಳಲ್ಲಿ ಶೂನ್ಯ ವೇಳೆ ಮುಗಿಯುತ್ತಿದ್ದಂತೆ ಕಲಾಪ ಮಂಗಳವಾರಕ್ಕೆ ಮುಂದೂಡಲಾಯಿತು.
ಸಿಎಂ ಸಿದ್ಧರಾಮಯ್ಯ ಸೇರಿದಂತೆ ಪಕ್ಷದ ನಾಯಕರೆಲ್ಲರೂ ಸಭೆಗೆ ಹಾಜರಾಗಬೇಕಾದ್ದರಿಂದ ಸದನ ತೊರೆದರು. ಹೀಗಾಗಿ ಸ್ಪೀಕರ್ ಸದನ ಮುಂದೂಡಿದರು. ವಿಶೇಷವೆಂದರೆ ವಿಪಕ್ಷಗಳೂ ಇದಕ್ಕೆ ಚಕಾರವೆತ್ತಲಿಲ್ಲ.