ಬೆಂಗಳೂರು: ನಗರದ ಬಿನ್ನಿಪೇಟೆ ಪೊಲೀಸ್ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಇನ್ನಿತರ ಕ್ವಾರ್ಟರ್ಸ್ನಲ್ಲಿ ಹೊಸದಾಗಿ ವಾಸಕ್ಕೆ ಅಲಾಟ್ ಮಾಡಿದ್ದೇವೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂಜಿನಿಯರ್ಗಳು, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ನಿಂದ ಪರಿಶೀಲನೆ ನಡೆಸಲಾಗಿದೆ. ಕ್ವಾರ್ಟರ್ಸ್ ಕಟ್ಟಡ ವಾಲಲು ಕಾರಣ ಏನು ಎಂಬ ಬಗ್ಗೆ ಅವರು ವರದಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಕಟ್ಟಡದಲ್ಲಿ ತಾಂತ್ರಿಕ ಕೊರತೆ ಇದೆ. ಕಟ್ಟಡದಲ್ಲಿ ಎರಡು ವರ್ಷದಿಂದ ಜನರು ವಾಸವಿದ್ದಾರೆ. ಅಕ್ಟೋಬರ್ 16 ಈ ಘಟನೆ ಬಗ್ಗೆ ವರದಿ ಕೊಟ್ಟಿದ್ದಾರೆ. ಕಟ್ಟಡ ವಾಲಲು ಕಾರಣ ಏನು ಎಂಬ ಬಗ್ಗೆ ವರದಿಗೆ ಕಳುಹಿಸಲಾಗಿದೆ. ಜೊತೆಗೆ ಪರಿಹಾರ ಸಹ ಹುಡುಕಬೇಕಾಗಿದೆ. ಸದ್ಯಕ್ಕೆ ವಾಸವಾಗಿದ್ದವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.