ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಮತ್ತು ಪ್ರಕಾಶ್ ರೈ ಸಹ ಗೌರಿ ಹತ್ಯೆಯನ್ನ ಖಂಡಿಸಿದ್ದಾರೆ.
ಗನ್ನಿನ ಮೂಲಕ ಧ್ವನಿಯನ್ನ ಅಡಗಿಸುವುದು ಡಿಬೇಟ್ ಗೆಲ್ಲುವುದು ಅತ್ಯಂತ ನೀಚ ಮಾರ್ಗವಾಗಿದೆ. ಗೌರಿ ಲಂಕೇಶ್ ನಿಧನದಿಂದ ದುಃಖತಪ್ತರಾಗಿರುವ ಎಲ್ಲರಿಗೂ ನನ್ನ ಸಂತಾಪವಿದೆ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.
30 ವರ್ಷಗಳಿಂದ ಗೌರಿ ಲಂಕೇಶ್ ನನಗೆ ಗೊತ್ತಿದೆ. ಒಂದು ರೀತಿಯಲ್ಲಿ ನಾವೆಲ್ಲರೂ ಪಿ. ಲಂಕೇಶ್ ಅವರ ಸಿದ್ಧಾಂತ, ಜೀವನಶೈಲಿಯಿಂದ ಪ್ರಭಾವಿತರಾದವರು. ಇವತ್ತಿನ ದಿನ ನಾವು ಯಾವ ಹಂತಕ್ಕೆ ಬಂದು ನಿಂತಿದ್ದೇವೆ ನೋಡಿ. ಅಸಹಿಷ್ಣುತೆ ಯಾವ ಮಟ್ಟಕ್ಕೆ ಬಂದು ನಿಂತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ..? ಕತ್ತಲಲ್ಲಿ ಬಂದು ಹೇಡಿಗಳು ಆಕೆಯನ್ನ ಕೊಂದು ಹೋಗಿದ್ದಾರೆ ಎಂದು ಖಂಡಿಸಿದ್ಧಾರೆ.
ಸೆಪ್ಟೆಂಬರ್ 5ರ ರಾತ್ರಿ ಕೆಲಸ ಮುಗಿಸಿಕೊಂಡು ರಾಜರಾಜೇಶ್ವರಿ ನಿವಾಸಕ್ಕೆ ಆಗಮಿಸಿದ ಗೌರಿ ಲಂಕೇಶ್ ಮೇಲೆ ಏಕಾಏಕಿ ಗುಂಡು ಹಾರಿಸಿದ್ದ. 3 ಬುಲೆಟ್`ಗಳು ಗೌರಿ ದೇಹ ಹೊಕ್ಕಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ