ಸಚಿವರೊಬ್ಬರು ತೆಗೆದುಕೊಂಡ ಕ್ಲಾಸ್ ಗೆ ರಿಮ್ಸ್ ನಿರ್ದೇಶಕ ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ.
ರಾಯಚೂರಿನಲ್ಲಿ ಕೊರೊನಾ ಸೋಂಕು ತಡೆ ಬಗ್ಗೆ ಸಭೆ ನಡೆಸಲಾಯಿತು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ಸಭೆ ನಡೆಯಿತು. ಅಲ್ಲಿ ರಿಮ್ಸ್ ನಲ್ಲಿ ವೈದ್ಯಕೀಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಿದ ರಿಮ್ಸ್ ನಿರ್ದೇಶಕ ಡಾ. ಬಸವರಾಜ್ ಪೀರಾಪುರ ತಡವರಿಸಲಾರಂಭಿಸಿದರು.
ಮಾಹಿತಿ ನೀಡಲು ತಡವರಿಸಿದ ರಿಮ್ಸ್ ನಿರ್ದೇಶಕರಿಗೆ ಸಚಿವ ಡಾ.ಸುಧಾಕರ ಕ್ಲಾಸ್ ತೆಗೆದುಕೊಂಡರು.
ಫಸ್ಟ್ ಟೈಮ್ ಪ್ರೆಜೆಂಟೇಶನ್ ಕೊಡುತ್ತಿದ್ದೀರಾ? ರಿಮ್ಸ್ ಆಸ್ಪತ್ರೆ ಯಾವಾಗ ಆರಂಭವಾಯ್ತು? ಎಷ್ಟು ಸಿಬ್ಬಂದಿ ಇದ್ದಾರೆ, ಎಷ್ಟು ಸಿಬ್ಬಂದಿ ಬೇಕಾಗಿದ್ದಾರೆ? ವೈದ್ಯಕೀಯ ಸಿಬ್ಬಂದಿ ಎಷ್ಟು ಇದ್ದಾರೆ ಎಂದು ಕೇಳಿದರು. ಆದರೆ ರಿಮ್ಸ್ ನಿರ್ದೇಶಕ ಬಸವರಾಜ್ ಪೀರಾಪುರ ತಡವರಿಸೋಕೆ ಮುಂದಾದರು. ಸಚಿವರ ಕ್ಲಾಸ್ ನಿಂದ ಕಕ್ಕಾಬಿಕ್ಕಿಯಾದರು.