ಕೋಲಾರ : ಸಂವಿಧಾನವನ್ನು ಅಂಬೇಡ್ಕರ್ ಅವರು ಬಿಟ್ಟು ಬೇರೆಯವರು ಬರೆದಿದ್ರೆ, ಅದು ಕೇವಲ ಅಕ್ಷರ ಜೋಡಣೆಯಾಗುತ್ತಿತ್ತು ಎಂದು ಅಂಬೇಡ್ಕರ್ ನೆನೆದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭಾವುಕರಾದರು.
ಕೋಲಾರದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯತೆ ಕುರಿತು ಸಂವಾದ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನ ಬರೆಯದಿದ್ದರೆ ಅದು ಕೇವಲ ಸಂವಿಧಾನ ಶಬ್ದಗಳ ಜೋಡಣೆ ಹಾಗೂ ವಾಕ್ಯಗಳು ಜೋಡಣೆಯಾಗಿರುತ್ತಿತ್ತು.
ಅಂಬೇಡ್ಕರ್ ಶೋಷಣೆಯ ಜೀವನಾನುಭವದ ಆಧಾರದ ಮೇಲೆ ಸಂವಿಧಾನ ರಚನೆ ಮಾಡಲು ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.