ಯುಸೂಫ್ ಮೊದಲ ಪತ್ನಿ ರುಕ್ಸಾನ ಮಾತನಾಡಿ, 'ಯಾರ ಮನೆಯಲ್ಲಿ ಜಗಳ ಆಗುವುದಿಲ್ಲ ಹೇಳಿ. ನಮ್ಮ ಮನೆಯಲ್ಲೂ ಜಗಳ ಆಗಿತ್ತು. ಗಂಡನ ವಿರುದ್ಧ ನನ್ನ ಕೈಯಿಂದಲೇ ಕೇಸ್ ಹಾಕಿಸಿದರು. ಬಳಿಕ ನಾವಿಬ್ಬರೂ ಮಾತನಾಡಿಕೊಂಡು ಕೇಸ್ ವಾಪಸ್ ಪಡೆದೆವು. ನನ್ನ ಗಂಡ ದೇವರ ಸಮಾನ. ನನ್ನ ಗಂಡನಿಗೆ ಸಮಸ್ಯೆ ಮಾಡಲು ಹೊರಟ್ಟಿದ್ದರು. ಸಂಸಾರದ ವಿಚಾರ ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ' ಎಂದು ಹೇಳಿದರು.
ಯುಸೂಫ್ ಎರಡನೇ ಪತ್ನಿ ಶಾಜಿಯಾ ಮಾತನಾಡಿ, 'ಸಚಿವರ ಹೇಳಿಕೆ ಸರಿ ಇಲ್ಲ. ಎಲ್ಲರ ಮನೆಯಲ್ಲೂ ಗಂಡ-ಹೆಂಡಿರ ಜಗಳ ಆಗುತ್ತದೆ, ನಿಮ್ಮ ಮನೆಯಲ್ಲಿ ಆಗುವುದಿಲ್ಲವೇ' ಎಂದು ಸೋಮಶೇಖರ್ ಅವರನ್ನು ಪ್ರಶ್ನಿಸಿದರು. 'ಚುನಾವಣೆಯಲ್ಲಿ ನನ್ನ ಗಂಡ ಗೆಲ್ಲುತ್ತಾನೆ ಎಂಬ ಕಾರಣಕ್ಕೆ ಅಪಪ್ರಚಾರ ನಡೆಸಲಾಗುತ್ತಿದೆ. ಸಚಿವರಿಗೆ ದಾಖಲೆ ಕೊಟ್ಟಿದ್ದೇ ನವೀದ್' ಎಂದು ಕಿಡಿಕಾರಿದರು.
ಯುಸೂಫ್ ಪುತ್ರಿ ಮಾತನಾಡಿ, 'ನನ್ನ ತಂದೆಯ ಮೇಲೆ ವೃಥಾ ಆರೋಪ ಮಾಡಿದ್ದಾರೆ. ನಮ್ಮ ತಂದೆ ತುಂಬಾ ಒಳ್ಳೆಯವರು. ಅತ್ಯಾಚಾರಕ್ಕೆ ಯತ್ನಿಸಿದರು ಎಂಬ ಆರೋಪದಿಂದ ನೋವಾಗಿದೆ. ಸಚಿವರು ಆರೋಪ ಸತ್ಯಕ್ಕೆ ದೂರವಾಗಿದೆ' ಎಂದರು.