Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಎಂ ಕ್ರಮಕ್ಕೆ ಪತ್ರಕರ್ತರ ಸಂಘ ಖಂಡನೆ

ಸಿಎಂ ಕ್ರಮಕ್ಕೆ ಪತ್ರಕರ್ತರ ಸಂಘ ಖಂಡನೆ
ಬೆಂಗಳೂರು , ಬುಧವಾರ, 29 ಮೇ 2019 (15:11 IST)
ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರ ಮೇಲೆ  ಪೊಲೀಸ್ ದೂರು ದಾಖಲಿಸಿರುವುದು ಸರಿಯಾದ ಕ್ರಮವಲ್ಲ ಮತ್ತು ಖಂಡನೀಯ ಎಂದು ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘ ತಿಳಿಸಿದೆ.

ಪತ್ರಿಕೆಯಲ್ಲಿ ಬಂದಿರುವ ಸುದ್ದಿ ಉದ್ದೇಶಪೂರಿತವಾಗಿದ್ದರೆ, ಸುಳ್ಳು ಮಾಹಿತಿಯಾಗಿದ್ದರೆ ಸ್ಪಷ್ಟನೆ, ವಿವರಣೆ ಕೊಡುವುದು ಕ್ರಮಬದ್ದವಾದದ್ದು. ಅದನ್ನು ಬಿಟ್ಟು ಸುದ್ದಿ ನೆಪ ಮಾಡಿ ದೂರು ದಾಖಲಿಸಿರುವುದು ದ್ವೇಷದ ನಡವಳಿಕೆಗೆ ಇಂಬು ನೀಡಿದಂತಾಗಿದೆ.

ಈ ಹಿಂದೆಯೂ ಪತ್ರಕರ್ತರ ಮೇಲಿನ ಹಲವು ಪ್ರಕರಣಗಳ ಬಗ್ಗೆ ತಮ್ಮ ಗಮನಕ್ಕೆ ತಂದಾಗ ತಾವು ಸ್ಪಂದಿಸಿದ್ದೀರಿ. ಮಾಧ್ಯಮ ಸ್ನೇಹಿಯಾಗಿ ನಡೆದುಕೊಂಡಿದ್ದೀರಿ ಅದನ್ನು ಸಂಘ ಸ್ಮರಿಸುತ್ತದೆ.

ವಿಶ್ವವಾಣಿ ಮೇಲೆ ದೂರು ದಾಖಲಿಸಿರುವುದು ತಮ್ಮ ಗಮನಕ್ಕೆ ಬಾರದೆಯೂ ಇರಬಹುದು. ಈ ಬಗ್ಗೆ ತಾವು ಮಾಹಿತಿ ತರಿಸಿಕೊಂಡು ಪರಿಶೀಲಿಸಿ ಪ್ರಕರಣ ಅಂತ್ಯಗೊಳಿಸಬೇಕು ಎನ್ನುವುದು ವಿನಮ್ರ ಮನವಿ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದ್ವೇಷದ, ಕಿಚ್ಚಿನ ನಡೆ ಒಳ್ಳೆಯದಲ್ಲ. 

ಮಾಧ್ಯಮ ಮತ್ತು ಸರ್ಕಾರದ ನಡುವೆ ಸೌಹಾರ್ದ ವಾತಾವರಣ ಇರುವಂತಾಗಲು ನಾಡಿನ ಮುಖ್ಯಮಂತ್ರಿಯಾಗಿ ತಾವು ಪ್ರಜ್ಞಾಪೂರ್ವಕವಾಗಿ ಸಂಯಮದ ಹೆಜ್ಜೆ ಇಡಬೇಕು ಎಂದು ಆಶಿಸುತ್ತೇನೆ. 

ಕದಡಿದ ವಾತಾವಾರಣ ತಿಳಿಗೊಳಿಸಲು, ತಾವು ಇಚ್ಚಿಸಿದಲ್ಲಿ ಸಂವಾದಕ್ಕೂ ಸಿದ್ಧವಿದ್ದೇವೆ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

ಹೀಗಂತ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಅಧ್ಯಕ್ಷ ಶಿವಾನಂದ ತಗಡೂರು, ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಖಡಕ್ ಆಫೀಸರ್ ಅಣ್ಣಾಮಲೈ ರಾಜಕೀಯಕ್ಕೆ ಎಂಟ್ರಿ