ವಿಜಯಪುರ ಜಿಲ್ಲೆಯ ನೀರಾವರಿ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ವಿರುದ್ಧ ಪರೋಕ್ಷವಾಗಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಟೀಕೆ ಮಾಡಿದ್ದಾರೆ.
ನಾವು ಅಧಿಕಾರದಲ್ಲಿ ಇದ್ದಾಗ ವಿಜಯಪುರ ಜಿಲ್ಲೆಯ ನೀರಾವರಿಗಾಗಿ ಕೋಟ್ಯಾಂತರ ಹಣ ಬಿಡುಗಡೆ ಮಾಡಿದ್ದೇವೆ. ಅಲ್ಲದೆ ಈಗ ಇಲ್ಲಿ ಇರುವ ಕಾಲುವೆಗಳು ಖಾಲಿ ಕಾಣುತ್ತಿವೆ ಇದು ನೋವಿನ ಸಂಗತಿಯಾಗಿದೆ ಎಂದರು. ಈ
ಹಿಂದೆ ಸರಕಾರ ನೀರಾವರಿಗಾಗಿ ಕೋಟ್ಯಂತರ ಹಣ ಬಿಡುಗಡೆ ಮಾಡಿದ್ದರೂ ಕಾಮಗಾರಿ ಸಂಪೂರ್ಣ ಆಗಿದ್ದರ ಬಗ್ಗೆ ಕಾಣುತ್ತಿಲ್ಲ, ಕಾಲುವೆ ನೀರು ಕಾಣುತ್ತಿಲ್ಲ ಎಂದರು.
ಬರದ ನಾಡಿಗೆ ನೀರು ಅವಶ್ಯಕತೆ ಇದೆ. ಈಗಿರುವ ನೀರಾವರಿ ಸಚಿವರು ಕೂಡಾ ವಿಜಯಪುರ ಜಿಲ್ಲೆಯ ನೀರಾವರಿ ಗಾಗಿ ಶ್ರಮಿಸಬೇಕು ಎಂದರು.
ಉಪಚುಣಾವಣೆಯಲ್ಲಿ ನಾವು ಒಗ್ಗಟ್ಟಿನಿಂದ ಇರುತ್ತೇವೆ. ಅಷ್ಟೆ ಅಲ್ಲದೆ ಎಲ್ಲಾ ಸ್ಥಾನಗಳಲ್ಲಿಯೂ ಗೆಲ್ಲುತ್ತೇವೆ ಎಂದರು.
ಮುಳವಾಡ ಏತ ನೀರಾವರಿ, ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮಾಡುವಲ್ಲಿ ನನ್ನ ಪಾತ್ರ ಇದೆ ಎಂದು ಹೆಚ್.ಡಿ.ದೇವೇಗೌಡರು ಹೇಳಿದರು.