Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದಿಗ್ವಿಜಯ್ ಸಿಂಗ್ ಭೇಟಿಯಾದ ಜೆಡಿಎಸ್ ಬಂಡಾಯ ಶಾಸಕರು

ದಿಗ್ವಿಜಯ್ ಸಿಂಗ್ ಭೇಟಿಯಾದ ಜೆಡಿಎಸ್ ಬಂಡಾಯ ಶಾಸಕರು
ಬೆಂಗಳೂರು , ಮಂಗಳವಾರ, 18 ಏಪ್ರಿಲ್ 2017 (13:31 IST)
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಆರೋಪದಲ್ಲಿ ಜೆಡಿಎಸ್ ಪಕ್ಷದಿಂದ ಉಚ್ಚಾಟನೆಯಾಗಿರುವ ಜೆಡಿಎಸ್`ನ ಬಂಡಾಯ ಶಾಸಕರು ಇವತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಶಾಸಕರಾದ ಜಮೀರ್ ಅಹಮ್ಮದ್ ಮತ್ತು ಚೆಲುವರಾಯಸ್ವಾಮಿಯವರು ದಿಗ್ವಿಜಯ್ ಸಿಂಗ್ ಮತ್ತು ಸಿಎಂ ಸಿದ್ದರಾಮಯ್ಯನವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ಸ್ಪಷ್ಟ ಹೇಳಿಕೆ ಹೊರಬಿದ್ದಿಲ್ಲ. ಈ ಬಗ್ಗೆ ಕಾಂಗ್ರೆಸ್ ಪಕ್ಷದಿಂದಾಗಲಿ ಅಥವಾ ಬಂಡಾಯ ಶಾಸಕರಿಂದಾಗಲಿ ಅಧಿಕೃತ ಹೇಳಿಕೆ ಬಂದಿಲ್ಲ.

ಈ ಮಧ್ಯೆ, ಬಂಡಾಯ ಶಾಸಕರ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಅವರ ರಾಜಕೀಯ ಬೆಳವಣಿಗೆಗೆ ನಾನು ತೊಡಕು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಅಷ್ಟರೊಳಗೆ ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ತಾರಾ..? ಅಥವಾ ಮಾತೃ ಪಕ್ಷ ಜೆಡಿಎಸ್`ಗೆ ಹಿಂದಿರುಗುತ್ತಾರಾ..? ಎಂಬುದು ಕುತೂಹಲ ಕೆರಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಎಚ್.ವೈ ಮೇಟಿಗೆ ಕ್ಲೀನ್ ಚಿಟ್ ಸಾಧ್ಯತೆ