Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯದಲ್ಲಿ ಪ್ರಜಾಪುಭುತ್ವ ಇದ್ಯಾ?: ಎನ್‌.ಎಚ್‌.ಕೋನರೆಡ್ಡಿ

ರಾಜ್ಯದಲ್ಲಿ ಪ್ರಜಾಪುಭುತ್ವ ಇದ್ಯಾ?: ಎನ್‌.ಎಚ್‌.ಕೋನರೆಡ್ಡಿ
ಧಾರವಾಡ , ಶನಿವಾರ, 30 ಜುಲೈ 2016 (10:46 IST)
ಮಹದಾಯಿ ಹೋರಾಟದಲ್ಲಿ ಪೊಲೀಸರಿಂದ ಸಾರ್ವಜನಿಕರ ಮೇಲೆ ಅಮಾನವೀಯ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಹೋರಾಟವನ್ನು ಮುಗಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಈ ರಾಜ್ಯದಲ್ಲಿ ಪ್ರಜಾಪುಭುತ್ವ ಇದ್ಯಾ? ಎಂದು ಜೆಡಿಎಸ್‌ ಶಾಸಕ ಎನ್‌.ಎಚ್‌.ಕೋನರೆಡ್ಡಿ ಪ್ರಶ್ನಿಸಿದ್ದಾರೆ.
 
ಹೋರಾಟಗಾರರು ಕುಡಿಯಲು ನೀರು ಕೇಳುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ರಾಜ್ಯದ ಜನತೆಗೆ ವಿಷ ನೀಡಿದೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಸ್ಥಿತಿ ನೋಡಿರಲಿಲ್ಲ. ನೀರಿಗಾಗಿ ಹೋರಾಟ ಮಾಡುವ ರೈತರ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಿ. ಬೇಕಾದರೆ ನನ್ನ ಮೇಲೆ ಹಲ್ಲೆ ಮಾಡಿ. ನನ್ನ ಜೀವವನ್ನು ತ್ಯಾಗ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ.
 
ಹೋರಾಟಗಾರರು ನೀರು ಕೇಳಿದ್ದು ತಪ್ಪಾ? ಸರಕಾರದ ಈ ವರ್ತನೆಯಿಂದ ರಾಜ್ಯದ ಜನತೆ ಕಣ್ಣೀರಿಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರಕಾರ ಹಾಗೂ ಪೊಲೀಸರನ್ನು ಕೈಮುಗಿದು ಕೇಳುತ್ತಿದ್ದೇನೆ ರೈತರ ಮೇಲೆ ಹಲ್ಲೆ ಮಾಡಬಾಡಿ ಎಂದು ಜೆಡಿಎಸ್‌ ಶಾಸಕ ಎನ್‌.ಎಚ್‌.ಕೋನರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕರ್ನಾಟಕ ಬಂದ್!