ಬೆಂಗಳೂರು : ನೇಪಾಳ ಸರ್ಕಾರ ಸೌಹಾರ್ದ ರಾಯಭಾರಿಯನ್ನಾಗಿ ಮಾಜಿ ಸಂಸತ್ ಸದಸ್ಯೆ ಹಾಗೂ ಖ್ಯಾತ ನಟಿ ಜಯಪ್ರದಾ ಅವರನ್ನುನೇಮಕ ಮಾಡಿಕೊಂಡಿದೆ.
ನಟಿ ಜಯಪ್ರದಾರವರನ್ನು ಸೌಹಾರ್ದ ರಾಯಭಾರಿಯನ್ನಾಗಿ ಆಯ್ಕೆಮಾಡುವ ಬಗ್ಗೆ ನೇಪಾಳ ಸರ್ಕಾರ ಸಂಸತ್ತಿನಲ್ಲಿ ಪ್ರಸ್ತಾಪಿಸಿದಾಗ ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ನೀಡುವುದರ ಮೂಲಕ ನೇಪಾಳ ಸರ್ಕಾರದ ಸೌಹಾರ್ದ ರಾಯಭಾರಿಯನ್ನಾಗಿ ನಟಿ ಜಯಪ್ರದಾರವರು ಸರ್ವಾನುಮತದಿಂದ ಆಯ್ಕೆಗೊಂಡರು.
ಜಯಪ್ರದಾ ಅವರು ರಾಯಭಾರಿ ಹುದ್ದೆಗೆ ನೇಮಕಗೊಂಡರೆ ನೆರೆಹೊರೆ ರಾಷ್ಟ್ರಗಳ ನಡುವಿನ ಹಳೆಯ ಸಾಂಸ್ಕೃತಿಕ ಸಂಬಂಧ ಮತ್ತಷ್ಟು ಬಲಗೊಳಿಸುವ ಹಾಗೂ ನೇಪಾಳದ ಪ್ರವಾಸೋದ್ಯಮ ಇಲಾಖೆಯನ್ನು ಭಾರತದಲ್ಲಿ ಉತ್ತೇಜಿಸಲು ನೆರವಾಗಲಿದೆ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಒಟ್ಟು ನಾಲ್ಕು ವರ್ಷಗಳ ಕಾಲ ಜಯಪ್ರದಾ ಅವರು ನೇಪಾಳದ ರಾಯಭಾರಿಗಳಾಗಲಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ