ಸುತ್ತೂರು ಶ್ರೀಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ನಡೆಯುತ್ತಿದೆ. ಜಾತ್ರೆ ಅಂಗವಾಗಿ ಕಳೆದ ರಾತ್ರಿ ಶ್ರೀ ಕ್ಷೇತ್ರದಲ್ಲಿ ತೆಪ್ಪೋತ್ಸವ ಸಡಗರದಿಂದ ನೆರವೇರಿತು.
ಆದಿಜಗದ್ಗುರು ಶ್ರೀ ಶಿವರಾತ್ರೇಶ್ವರ ಶಿವಯೋಗಿಗಳ ಪ್ರತಿಷ್ಠಾಪಿಸಿದ ತೆಪ್ಪೋತ್ಸವಕ್ಕೆ ಸುತ್ತೂರು ಶ್ರೀಗಳು ಚಾಲನೆ ನೀಡಿದರು.
ಬಾಣ ಬಿರುಸುಗಳು ಮೆರಗು ನೀಡಿದವು. ಒಂದು ಗಂಟೆ ಕಾಲ ನಡೆದ ತೆಪ್ಪೋತ್ಸವ ಭಕ್ತರ ಮನ ಗೆದ್ದಿತು. ಒಂದು ದಡದಿಂದ ಮತ್ತೋಂದು ದಡಕ್ಕೆ ಸಾಗಿದ ತೆಪ್ಲೋತ್ಸವವು, ಕಪಿಲ ನದಿಯಲ್ಲಿ ತೇಲಿತು. ತೇಲುವ ದೋಣಿಯಲ್ಲಿ ಸಂಗೀತ ಸ್ವರ ಕಳೆಗಟ್ಟಿತು.
ವಿವಿಧ ಹೂ ಹಾಗೂ ದೀಪಾಲಂಕಾರದಿಂದ ಕಂಗೊಳಿಸಿದ ತೆಪ್ಪೋತ್ಸವವನ್ನು ಲಕ್ಷಾಂತರ ಜನರು ವೀಕ್ಷಣೆ ಮಾಡಿದರು.