ಬೆಂಗಳೂರು: ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಬೆಳಗಾವಿ ಕಾಂಗ್ರೆಸ್ ನ ಘಟಾನುಘಟಿ ನಾಯಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಗುದ್ದಾಟ ಇನ್ನೊಂದು ಮಟ್ಟಕ್ಕೆ ಸಾಗಿದೆ.
ಇದೀಗ ಜಾರಕಿಹೊಳಿ ಸಹೋದರರ ಬಂಡಾಯ ಸಮ್ಮಿಶ್ರ ಸರ್ಕಾರಕ್ಕೇ ಕಂಟಕವಾಗುವ ಲಕ್ಷಣ ಕಾಣುತ್ತಿದೆ. ಇದರ ಹಿಂದೆ ಬಿಜೆಪಿ ನಾಯಕರಾದ ಬಿ ಶ್ರೀರಾಮುಲು ಮತ್ತು ರೇಣುಕಾಚಾರ್ಯ ಕೈವಾಡವೂ ಇದೆ ಎನ್ನುವುದು ಕಾಂಗ್ರೆಸ್ ವಲಯದ ಆರೋಪ.
ಈಗಾಗಲೇ ಬಿಜೆಪಿಯಲ್ಲಿರುವ ಬಾಲಚಂದ್ರ ಜಾರಕಿಹೊಳಿ ಮೂಲಕ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಅವರನ್ನೂ ಬಿಜೆಪಿಗೆ ಸೆಳೆಯಲು ತೆರೆಮರೆಯ ಯತ್ನ ಸಾಗಿದೆ. ಇವರ ಮೂಲಕ ಮತ್ತಷ್ಟು ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆದು ಆಪರೇಷನ್ ಕಮಲ ಮೂಲಕ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನ ನಡೆದಿದೆ. ಆದರೂ ವಿದೇಶ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಹಿಂತಿರುಗವರೆಗೆ ಕಾಯಲು ಜಾರಕಿಹೊಳಿ ಸಹೋದರರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಅಂತೂ ಇದೀಗ ಹೊಸದೊಂದು ತಲೆನೋವು ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.