ವರದಕ್ಷಿಣೆ ಕಿರುಕುಳ ಸಾಮಾಜಿಕ ಪಿಡುಗಾಗಿದ್ದು ಅದನ್ನ ತೊಡೆದುಹಾಕಲು ಸಾಕಷ್ಟು ಕಾನೂನನ್ನ ಗಟ್ಟಿಗೊಳಿಸಲಾಗಿದೆ.ಅದಕ್ಕೆ ಸಿನಿಮಾದ ಮೂಲಕ ಕೂಡ ವರದಕ್ಷಿಣೆ ಪಡೆದ್ರೆ,ಕಿರುಕುಳ ಕೊಟ್ರೆ ಏನ್ ಶಿಕ್ಷೆ ಆಗುತ್ತೆ ಅಂತ ತೋರಿಸಿದ್ದಾರೆ. ಆದ್ರೇ ಇಲ್ಲೋಬ್ಬ ನಟಿ ವರದಕ್ಷಿಣೆ ಕಿರುಕುಳ ನೀಡಿದ ಹಿನ್ನೆಲೆ ಐದು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಳೆ.
ಸ್ಯಾಂಡಲ್ ವುಡ್ ನಟಿ ವರದಕ್ಷಿಣೆ ಕೇಸ್ ನಲ್ಲಿ ಹೈಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅತ್ತಿಗೆಗೆ ವರದಕ್ಷಿಣೆ ಕಿರುಕುಳ ಕೊಟ್ಟ ಹಿನ್ನೆಲೆ ನಟಿ ಅಭಿನಯ ಕುಟುಂಬದ ಮೇಲೆ ಕೇಸ್ ದಾಖಲಾಗಿತ್ತು.
ಅನುಭವ ಚಿತ್ರದ ಮೂಲಕ ಖ್ಯಾತಿಗಳಿಸಿದ್ದ ನಟಿ ಅಭಿನಯಗೆ ದಶಕಗಳಿಂದ ಸಿನಿಮಾ ಮತ್ತು ಸೀರಿಯಲ್ ನಲ್ಲಿ ನಟನೆ ಮಾಡ್ತಿದ್ದಾರೆ. ಅಭಿಯನ ಅವರ ಅಣ್ಣ ಶ್ರೀನಿವಾಸ್ ಪತ್ನಿ ಲಕ್ಷ್ಮೀದೇವಿಗೆ ಕಿರುಕುಳ ನೀಡಿದ ಆರೋಪ ಹಿನ್ನೆಲೆ 2002 ರಲ್ಲಿ ಕೇಸ್ ದಾಖಲಾಗಿತ್ತು.
ಲಕ್ಷ್ಮೀದೇವಿ 1998ರಲ್ಲಿ ನಟಿ ಅಭಿನಯ ಸೋದರ ಶ್ರೀನಿವಾಸ್ ಜೊತೆ ವಿವಾಹವಾಗಿತ್ತು ಮದುವೆ ವೇಳೆ 80 ಸಾವಿರ ರೂಪಾಯಿ ಹಾಗೂ 250 ಗ್ರಾಂ ಚಿನ್ನಾಭರಣವನ್ನ ವರದಕ್ಷಿಣೆ ರೂಪದಲ್ಲಿ ಪಡೆದಿದ್ರು.ಬಳಿಕ 1 ಲಕ್ಷಕ್ಕೆ ಬೇಡಿಕೆ ಇಟ್ಟು 20 ಸಾವಿರ ಪಡೆದ ನಂತರವೂ ಕಿರುಕುಳ ನೀಡಿ
ವರದಕ್ಷಿಣೆ ಪಡೆದಿದ್ದಲ್ಲದೆ ಲಕ್ಷ್ಮೀದೇವಿ ಅವರನ್ನ ಅವರ ಪೋಷಕರ ಮನೆಯಲ್ಲಿ ಬಿಟ್ಟಿದ್ರು.ಗಂಡನ ಮನೆಗೆ ಬಂದ ಲಕ್ಷ್ಮೀದೇವಿ ಹಾಗೂ ಪೋಷಕರಿಗೆ ಅವಮಾನ ಮಾಡಿದರು.ಆರೋಪ ಹಿನ್ನೆಲೆ ಅಭಿನಯ ಸೇರಿ ಕುಟುಂಬದ ವಿರುದ್ಧ 2002 ರಲ್ಲಿ ಚಂದ್ರಾಲೇಔಟ್ ಠಾಣೆಯಲ್ಲಿ ದೂರು ಸಲ್ಲಿಸಿದ್ರು. ಚಾರ್ಜ್ ಶೀಟ್ ಸಲ್ಲಿಕೆಯಾಗಿ ಐವರು ಆರೋಪಿಗಳಿಗೆ 2012ರಲ್ಲಿ ಕೋರ್ಟ್ ತಲಾ 2 ವರ್ಷ ಶಿಕ್ಷೆ ಪ್ರಕಟಿಸಿತ್ತು.ನಂತರ ಜಿಲ್ಲಾ ನ್ಯಾಯಾಲಯಕ್ಕೆ ಐವರು ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ರು.ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಆರೋಪಿಗಳನ್ನ ಖುಲಾಸೆಗೊಳಿಸಿ ಆದೇಶಿಸಿತ್ತು.ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಲಕ್ಷ್ಮೀದೇವಿ ಹಾಗೂ ಸರ್ಕಾರ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿತ್ತು.ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ
ಇನ್ನೂ ಪ್ರಕರಣ ಪ್ರಮುಖ ಆರೋಪಿಗಳಾದ ಎ1-ಶ್ರೀನಿವಾಸ್ , ಎ-2 ರಾಮಕೃಷ್ಣ ಸಾವನ್ನಪ್ಪಿದ ಹಿನ್ನಲೆ ಉಳಿದ ಮೂವರಾದ
ನಟಿ ಅಭಿನಯ ಅವರ ತಾಯಿ ಎ-3 ಜಯಮ್ಮಗೆ 5 ವರ್ಷ ಕಾರಾಗೃಹ ಶಿಕ್ಷೆ ಪ್ರಕಟಿಸಿದೆ ಎ-4 ಚೆಲುವರಾಜ್, ಎ-5 ಅಭಿನಯಾಗೆ 2 ವರ್ಷ ಜೈಲು ಹಾಗೂ ದಂಡ ವಿಧಿಸಿ ಆದೇಶಹೊರಡಿಸಿದೆ.ಅಭಿನಯದ ವರದಕ್ಷಿಣೆ ಕಿರುಕುಳದ ಅಭಿನಯಕ್ಕೆ ಸುಸ್ತಾದಗಿದ್ದ ಅವತ ಅತ್ತಿಗೆ ಕೊನೆಗೂ ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ.ಸಮಾಜಕ್ಕೆ ಮಾದರಿಯಾಗಬೇಕಾದ ನಟಿ ಕಂಟಕವಾಗಿದ್ದು ಮಾತ್ರ ದುರಂತವೇ ಸರಿ.