Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಧಾನಸಭೆಯಲ್ಲಿ ಜಗದೀಶ್ ಶೆಟ್ಟರ್ ಕೋಪಕ್ಕೆ ಕಾರಣವಾದ ಘಟನೆ

ವಿಧಾನಸಭೆಯಲ್ಲಿ ಜಗದೀಶ್ ಶೆಟ್ಟರ್ ಕೋಪಕ್ಕೆ ಕಾರಣವಾದ ಘಟನೆ
Bangalore , ಸೋಮವಾರ, 27 ಮಾರ್ಚ್ 2017 (11:25 IST)
ಬೆಂಗಳೂರು: ರಾಜ್ಯ ರಾಜಕೀಯ ನಾಯಕರಿಗೆ ಈಗ ವಿಧಾನಸಭೆ ನಡೆಯುತ್ತಿದೆ ಎನ್ನುವುದೇ ಮರೆತುಹೋಗಿರಬೇಕು. ಅದಕ್ಕೇ ಅಧಿವೇಶನ ನಡೆಯುತ್ತಿದ್ದರೂ, ಆಡಳಿತಾರೂಢ ಕಾಂಗ್ರೆಸ್ ನ ಸಚಿವರುಗಳು ನಾಪತ್ತೆ.

 

ಇದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೋಪಕ್ಕೆ ಕಾರಣವಾಯ್ತು. ವಿಧಾನ ಸಭೆ ನಡೆಯುತ್ತಿದ್ದರೂ, ಕೇವಲ ಐವರು ಸಚಿವರು ಮಾತ್ರ ಭಾಗಿಯಾಗಿದ್ದಾರೆ. ಸರ್ಕಾರಕ್ಕೆ ಅಧಿವೇಶನಕ್ಕಿಂತ ಉಪಚುನಾವಣೆಯೇ ಮುಖ್ಯವಾಯ್ತಾ ಎಂದು ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.

 
ಆದರೆ ಇದು ಸಂವಹನ ಕೊರತೆಯ ಫಲ. ಈವತ್ತು ಸಂಬಂಧಪಟ್ಟ ಸಚಿವರು ಉತ್ತರ ಕೊಡಬೇಕಿತ್ತು ಎನ್ನುವ ಬಗ್ಗೆ ಮಾಹಿತಿ ಕೊರತೆಯಿಂದ ಬಂದಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ತೇಪೆ ಹಾಕಲು ಪ್ರಶ್ನಿಸಿದರು. ಆದರೆ ಇದರಿಂದ ಕೋಪಗೊಂಡ ಶೆಟ್ಟರ್, ಸಚಿವರುಗಳಿಗೆ ಯಾವಾಗ ಬೇಕಾದರೂ, ಅಧಿವೇಶನದಲ್ಲಿ ಪ್ರಶ್ನೆ ಬರಬಹುದು. ಅಧಿವೇಶನ ಇರುವಾಗ ಅವರು ಯಾವತ್ತೂ ಹಾಜರರಿಬೇಕು ಎಂದು ಹೇಳಿದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

‘ದಿನಕ್ಕೆ 20 ಗಂಟೆ ಕೆಲಸ ಮಾಡದಿದ್ದರೆ ಗಂಟು ಮೂಟೆ ಕಟ್ಟಿ’