Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ITC ಕಂಪನಿಯಿಂದ ಕನ್ನಡಿಗರು ಹೊರಕ್ಕೆ!

ITC ಕಂಪನಿಯಿಂದ ಕನ್ನಡಿಗರು ಹೊರಕ್ಕೆ!
ದಾವಣಗೆರೆ , ಗುರುವಾರ, 17 ಅಕ್ಟೋಬರ್ 2019 (19:18 IST)
ಕನ್ನಡಿಗರನ್ನು ಹೊರ ಹಾಕುತ್ತಿರುವ ಐಟಿಸಿ ಕಂಪನಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿರುವ ಐಟಿಸಿ ಕಂಪನಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಕಾರ್ಯಕರ್ತರು ದಾವಣಗೆರೆಯ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಐಟಿಸಿ ಕಂಪನಿಯಲ್ಲಿ  ನವೀನ್ ಮಲ್ಲೇನಹಳ್ಳಿ ಎಂಬ ಉದ್ಯೋಗಿ  ಕನ್ನಡ ರಾಜ್ಯೋತ್ಸವ ಆಚರಿಸಿದ್ದ ಎಂಬ ಏಕಾಏಕಿ ಕಾರಣಕ್ಕೆ, ನೋಟಿಸ್  ನೀಡದೇ ನವೀನ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಐಟಿಸಿ ಕಂಪನಿ ನಮ್ಮ ನಾಡಿನ ನೆಲ, ಜಲವನ್ನು ಉಪಯೋಗಿಸಿಕೊಳ್ಳುತ್ತಾರೆ. ಆದರೆ ಕನ್ನಡಿಗರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಕರ್ನಾಟಕ ರಕ್ಷಣ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ವಿಷಯದ ಬಗ್ಗೆ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕಾಗಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಜಯದೇವ ವೃತ್ತದಿಂದ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ರು.  




Share this Story:

Follow Webdunia kannada

ಮುಂದಿನ ಸುದ್ದಿ

'ನೆರೆ ಛಾಯೆ' ಛಾಯಾಚಿತ್ರ ಪ್ರದರ್ಶನ: ಭೀಕರ ಚಿತ್ರಗಳ ಅನಾವರಣ