Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

20 ವರ್ಷಗಳಿಂದ ಆಗದ್ದು ಈಗ ಆಗಿ ಬಿಟ್ಟಿದೆ…!

20 ವರ್ಷಗಳಿಂದ ಆಗದ್ದು ಈಗ ಆಗಿ ಬಿಟ್ಟಿದೆ…!
ರಾಯಚೂರು , ಶನಿವಾರ, 13 ಏಪ್ರಿಲ್ 2019 (16:33 IST)
ಕಳೆದ ಎರಡು ದಶಕಗಳಿಂದ ಆಗದ್ದು ಈಗ ಖಾಲಿ ಆಗಿದೆ.
ಜನರು ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸುತ್ತಿದ್ದ ಹಳ್ಳ ಈ ಬಾರಿ ಖಾಲಿ ಆಗಿರೋದು ಅಲ್ಲಿನ ಜನರಲ್ಲಿ ಚಿಂತೆಗೀಡುಮಾಡಿದೆ. ಈ ಮೂಲಕ ಜನರೂ ಸೇರಿ ಮೂಕ ಪ್ರಾಣಿಗಳು ಕಂಗಾಲಾಗಿವೆ.

ರಾಯಚೂರು ಜಿಲ್ಲೆಯನ್ನು ಸತತವಾಗಿ ಕಾಡುತ್ತಿರುವ ಬರಗಾಲ ಕಳೆದ ಎರಡು ದಶಕಗಳಲ್ಲಿ ಬತ್ತದ ಹಳ್ಳವನ್ನು ಈ ಬಾರಿ ಖಾಲಿ ಮಾಡಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ-ಜಂಬಲದಿನ್ನಿ ಹಳ್ಳ ಯಾವುದೇ ಬರಗಾಲಕ್ಕೂ ಜಗ್ಗಿರಲಿಲ್ಲ. ಆದ್ರೆ ಈ‌ ಬಾರಿ ಹಳ್ಳದಲ್ಲಿ ನೀರಿಲ್ಲ.

ಪರಿಣಾಮ ಹಳ್ಳ ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಿರುವ ಜೊತೆಗೆ ಜನ ಜಾನುವಾರುಗಳಿಗೆ ಜೀವಜಲದ ಸಮಸ್ಯೆ ಉದ್ಭವಿಸಿದೆ. ಬಿಸಿಲೂರಿನ 20 ವರ್ಷಗಳಿಂದ ಬತ್ತದ ಹಳ್ಳ ಭೀಕರ ಬರಗಾಲಕ್ಕೆ ಖಾಲಿ ಆಗಿದೆ. ಈ ಹಳ್ಳ ಗಲಗ, ಮುಂಡರಗಿ, ಹುಲಿಗುಡ್ಡ, ಪರಪುರ ಗ್ರಾಮಗಳ ಜನರಿಗೆ ನೀರು ಒದಗಿಸುತ್ತಿತ್ತು.

ಭೀಕರ ಬರಗಾಲದ ಕಾರಣ ಕಳೆದ ಎರಡು ದಶಕಗಳಿಂದ ಬತ್ತದ ಅಮರಾಪುರ-ಜಂಬಲದಿನ್ನಿ ಹಳ್ಳ ಬತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ಖಾಸಗಿ ಬಸ್ ಸುಟ್ಟಿದ್ದು ಯಾರು?