ಅಡಿಕೆ ಉದ್ಯಮಿಗೆ ಸೇರಿದ ಮನೆ ಹಾಗೂ ಗೋಡೌನ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿತ್ರದುರ್ಗದ ಇಂಡಸ್ಟಿಯಲ್ ಏರಿಯಾದಲ್ಲಿನ ಗೋದಾಮು ಮೇಲೆ ಐಟಿ ರೇಡ್ ನಡೆದಿದೆ.
ಕಡೂರು ಮೂಲದ ಉದ್ಯಮಿ ಉದಯ ಶೆಟ್ಟಿ ಸೇರಿದ ಗೋಮಾಮಿನ ಮೇಲೆ ದಾಳಿ ನಡೆದಿದ್ದು, JCR ಬಡಾವಣೆಯ ಮನೆ ಮೇಲೆಯೂ ಐಟಿ ದಾಳಿ ನಡೆದು, ದಾಖಲೆಗಳ ತಪಾಸಣೆ ನಡೆಸಲಾಗಿದೆ.
ಬೆಂಗಳೂರು ಮೂಲದ ಐಟಿ ಅಧಿಕಾರಿಗಳಿಂದ ಅಡಿಕೆ ಉದ್ಯಮಿ ಗೊಡೋನ್ ಮನೆ ಮೇಲೆ ದಾಳಿ ನಡೆದಿದೆ. ತಡ ರಾತ್ರಿ ದಾಳಿ ಮಾಡಿರುವ ಅಧಿಕಾರಿಗಳು ಪರಿಶೀಲನೆ ಹಾಗೂ ತಪಾಸಣೆ ನಡೆಸುತ್ತಿದ್ದಾರೆ. ಆದಾಯಕ್ಕೆ ಮೀರಿದ ಆಸ್ತಿಗಳಿರುವ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.