ಸತತ 2ನೇ ದಿನವೂ ಸಚಿವ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ 2 ನಿವಾಸಗಳಲ್ಲಿ ಐಟಿ ಅಧಿಕಾರಿಗಳ ತನಿಖೆ ಮುಂದುವರೆದಿದೆ. ಈ ಮಧ್ಯೆ 5 ಲಾಕರ್`ಗಳ ಪೈಕಿ ನಿನ್ನೆ 2 ಲಾಕರ್`ಗಳನ್ನ ಓಪನ್ ಮಾಡಲಾಗಿದ್ದು, ಇಂದು ನಕಲಿ ಕೀ ಮಾಡುವವರನ್ನ ಕರೆ ತಂದು 2 ಲಾಕರ್`ಗಳನ್ನ ಓಪನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಮಧ್ಯೆ, ಲಾಕರ್`ಗಳಲ್ಲಿ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಸಿಕ್ಕಿವೆ ಎಂಬ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಇನ್ನುಳಿದ ಮತ್ತೊಂದು ಲಾಕರ್ ಓಪನ್ ಮಾಡಲು ಡಿ.ಕೆ. ಶಿವಕುಮಾರ್ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. 5ನೇ ಲಾಕರ್ ಥಂಬ್ ಇಂಪ್ರೆಶನ್ ಮೂಲಕ ಓಪನ್ ಮಾಡಬೇಕಿದ್ದು, ಥಂಬ್ ಇಂಪ್ರೆಶನ್ ನೀಡಲು ಡಿ.ಕೆ. ಶಿವಕುಮಾರ್ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ನಿನ್ನೆ ಮನೆಯಿಂದ ಹೊರ ಬಂದು ಕೈಬೀಸುತ್ತಿದ್ದ ಡಿ.ಕೆ. ಶಿವಕುಮಾರ್ ಅವರು ಇವತ್ತು ಸುಳಿವೇ ಇಲ್ಲ. ಐಟಿ ದಾಳಿ ಬಳಿಕವೂ ಮೂರು ಬಾರಿ ಮಹಡಿಯಿಂದ ಹೊರ ಬಂದು ಕೈಬೀಸಿದ್ದ ಡಿ.ಕೆ. ಶಿವಕುಮಾರ್ ನಿನ್ನೆ ರಾತ್ರಿಯಿಂದ ಕಾಣಿಸಿಕೊಂಡಿಲ್ಲ. ಕಳೆದ 29 ಗಂಟೆಗಳಿಂದ ಐಟಿ ಇಲಾಖೆ ತೀವ್ರ ವಿಚಾರಣೆ ನಡೆಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ